ಭಾರತೀಯ ಪ್ರಯಾಣಿಕರಿಗೆ ಅಮೆರಿಕವು ತನ್ನ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧವನ್ನು ಇನ್ನಷ್ಟು ಸಡಿಲಗೊಳಿಸಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕೋವಿಡ್ 19 ಮಧ್ಯಮ ಪ್ರಮಾಣದಲ್ಲಿ ಇದೆ ಎಂದು ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ನೀಡಿದ ವರದಿ ಆಧರಿಸಿ ಪ್ರಯಾಣಿಕರಿಗೆ ನಿರ್ಬಂಧ ಸಡಿಲಗೊಳಿಸಲಾಗಿದೆ.
ಎಫ್ಡಿಎನಿಂದ ಮಾನ್ಯತೆ ಪಡೆದ ಲಸಿಕೆಯನ್ನು ಹಾಕಿಸಿಕೊಂಡವರಲ್ಲಿ ಕೋವಿಡ್ ರೋಗ ಲಕ್ಷಣ ಹೆಚ್ಚುವ ಅಪಾಯ ತುಂಬಾನೇ ಕಡಿಮೆ ಇರುತ್ತದೆ. ಹೀಗಾಗಿ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಕೈಗೊಳ್ಳುವ ಮುನ್ನ ಲಸಿಕೆ ಹಾಕಿಸಿಕೊಂಡ ಹಾಗೂ ಹಾಕಿಸಿಕೊಳ್ಳದ ಪ್ರಯಾಣಿಕರಿಗೆ ಸಿ.ಡಿ.ಸಿ. ನೀಡಿರುವ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸುವಂತೆ ಮಾಹಿತಿ ನೀಡಿದೆ.