alex Certify BIG NEWS: ಫೈಜರ್ ಲಸಿಕೆ ತುರ್ತು​ ಬಳಕೆಗೆ ಹಸಿರು ನಿಶಾನೆ ತೋರಿದ ಅಮೆರಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫೈಜರ್ ಲಸಿಕೆ ತುರ್ತು​ ಬಳಕೆಗೆ ಹಸಿರು ನಿಶಾನೆ ತೋರಿದ ಅಮೆರಿಕ

ಪೈಜರ್- ಬಯೋಟೆಕ್​ ತಯಾರಿಸಿರುವ ಕೋವಿಡ್​ 19 ಲಸಿಕೆ ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ತಡರಾತ್ರಿ ಹಸಿರು ನಿಶಾನ ತೋರಿದೆ. ಈ ಮೂಲಕ ಕೊರೊನಾ ಹೊಡೆತಕ್ಕೆ ಸಿಲುಕಿದ ವಿಶ್ವದ ದೊಡ್ಡಣ್ಣನಿಗೆ ಡೆಡ್ಲಿ ವೈರಸ್​ ವಿರುದ್ಧ ಹೋರಾಡಲು ಹೊಸ ಮಾರ್ಗ ಸಿಕ್ಕಂತಾಗಿದೆ.

ಲಸಿಕೆಗೆ ತುರ್ತು ಅನುಮೋದನೆ ಸಿಗುತ್ತಿದ್ದಂತೆಯೇ ಟ್ವೀಟಾಯಿಸಿದ ಡೊನಾಲ್ಡ್ ಟ್ರಂಪ್​ ಇದನ್ನ ವೈದ್ಯಕೀಯ ಪವಾಡ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಮುಂದಿನ 24ಗಂಟೆಯೊಳಗಾಗಿ ಲಸಿಕೆ ಬಳಕೆಯಾಗಲಿದೆ ಅಂತಾ ಭರವಸೆ ವ್ಯಕ್ತಪಡಿಸಿದರು.
ಅತಿ ಹೆಚ್ಚು ಕೊರೊನಾ ಸೋಂಕಿತರನ್ನ ಹೊಂದಿರುವ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನವನ್ನ ಪಡೆದಿದೆ. ಬ್ರಿಟನ್​, ಬಹರೇನ್​, ಕೆನಡಾ, ಸೌದಿ ಅರೇಬಿಯಾ ಹಾಗೂ ಮೆಕ್ಸಿಕೋ ನಂತರ 2 ಡೋಸ್​​ಗಳ ಲಸಿಕೆ ನೀಡಲು ಅನುಮತಿ ನೀಡಿದ ವಿಶ್ವದ ಆರನೇ ರಾಷ್ಟ್ರ ಅಮೆರಿಕವಾಗಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್​ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...