ನವದೆಹಲಿ: ಅಮೆರಿಕದ ಫುಡ್ ಬ್ಲಾಗರ್ ಐಟಾನ್ ಬರ್ನಾಥ್ ಪಂಜಾಬ್ನ ಗುರುದ್ವಾರದ ಬಳಿ ಬಂದಾಗ ಆತನಿಗೆ ಭವ್ಯ ಸ್ವಾಗತ ಹಾಗೂ ಉಚಿತ ಆಹಾರ ನೀಡಿ ಸ್ವಾಗತಿಸಲಾಗಿತ್ತು. ಭಾರತದ ಈ ಆತಿಥ್ಯ ನೋಡಿ ಆತ ಮನಸೋತಿದ್ದ. ಇದರಿಂದ ಬೆರಗಾದ ನಂತರ, ಬರ್ನಾಥ್ ಅವರು ರೊಟ್ಟಿ ತಯಾರಿಸುವ ಯಂತ್ರವನ್ನು ಖರೀದಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಬರ್ನಾಥ್ ಅವರು ಪಾಟ್ನಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಅಲ್ಲಿನ ಪ್ರಸಿದ್ಧ ಆಹಾರವಾಗಿರುವ ಲಿಟ್ಟಿ ಚೋಖಾ ತಯಾರಿಸಲು ಪ್ರಯತ್ನಿಸಿದರು.
“ಇಂದು ಪಾಟ್ನಾದಲ್ಲಿ “ದೀದಿ ಕಿ ರಸೋಯಿ” ನಲ್ಲಿ ಲಿಟ್ಟಿ ಚೊಕ್ಕಾ ತಿನ್ನುವ ಅವಕಾಶ ನನಗೆ ಸಿಕ್ಕಿತು. ದೀದಿಗಳು ನನ್ನನ್ನು ಅವರ ಅಡುಗೆಮನೆಗೆ ಸ್ವಾಗತಿಸಿದರು. ಅವರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಈ ಅದ್ಭುತ ಕಾರ್ಯಕ್ರಮದಲ್ಲಿ ನನಗೆ ವಿವಿಧ ಸಾಂಪ್ರದಾಯಿಕ ಬಿಹಾರಿ ಭಕ್ಷ್ಯಗಳನ್ನು ಕಲಿಸಿದರು” ಎಂದು ಬರ್ನಾಥ್ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಟನ್‌ಗಳಷ್ಟು ಪ್ರತಿಕ್ರಿಯೆಗಳು ಬಂದಿವೆ. ಭಾರತೀಯ ರಾಜ್ಯಗಳ ನಿಜವಾದ ಸುವಾಸನೆ ಮತ್ತು ಸಂಸ್ಕೃತಿಯನ್ನು ಕಲಿಯುವ ಪ್ರಯತ್ನಕ್ಕಾಗಿ ಜನರು ಬರ್ನಾಥ್ ಅವರನ್ನು ಶ್ಲಾಘಿಸುತ್ತಿದ್ದಾರೆ.
https://twitter.com/HarryIKA4/status/1616687059850383363?ref_src=twsrc%5Etfw%7Ctwcamp%5Etweetembed%7Ctwterm%5E1616687059850383363%7Ctwgr%5Ea889c2775a6eb5a4d4d6333a5e03ed2568b0b8af%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fus-chef-learns-how-to-make-litti-chokha-in-patna-watch-viral-video-2324882-2023-01-22