ಇಂಗ್ಲೆಂಡ್ ನಂತರ ಅಮೆರಿಕದಿಂದಲೂ ಶೇಕ್ ಹಸೀನಾಗೆ ಬಿಗ್ ಶಾಕ್ ನೀಡಲಾಗಿದೆ. ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ ವೀಸಾವನ್ನು ಅಮೆರಿಕ ರದ್ದುಪಡಿಸಿದೆ.
ಸೋಮವಾರ ನಡೆದ ವಿದ್ಯಾರ್ಥಿ ಮತ್ತು ಸಾರ್ವಜನಿಕ ಪ್ರತಿಭಟನೆಗಳ ಒತ್ತಡದ ಮೇರೆಗೆ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ನಂತರ ಅವರು ಭಾರತಕ್ಕೆ ಓಡಿಹೋಗಿದ್ದು, ಬಾಂಗ್ಲಾದೇಶದ ವಾಯುಪಡೆಯ ವಿಮಾನದ ಮೂಲಕ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ಏರ್‌ಬೇಸ್‌ಗೆ ಸಾಗಿಸಲಾಯಿತು.
ಯುನೈಟೆಡ್ ಕಿಂಗ್‌ಡಂನಲ್ಲಿ ರಾಜಕೀಯ ಆಶ್ರಯ ಪಡೆಯಲು ಹಸೀನಾ ಆಶಿಸಿದ್ದರು. ಆದಾಗ್ಯೂ, ಆಶ್ರಯ ನೀಡಲು ಯುಕೆ ಸಿದ್ಧವಾಗಿಲ್ಲ.
ಶೇಖ್ ಹಸೀನಾ ಅವರ ಕಿರಿಯ ಸಹೋದರಿ ಶೇಖ್ ರೆಹಾನಾ ಕೂಡ ಅವರೊಂದಿಗೆ ಭಾರತಕ್ಕೆ ಪರಾರಿಯಾಗಿದ್ದಾರೆ. ರೆಹಾನಾ ಯುಕೆ ಪೌರತ್ವವನ್ನು ಹೊಂದಿದ್ದಾರೆ ಮತ್ತು ಶೀಘ್ರದಲ್ಲೇ ಯುಕೆಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಆದರೆ, ಹಸೀನಾ ಅವರೊಂದಿಗೆ ಬರುತ್ತಾರೆಯೇ ಎಂಬುದು ದೃಢಪಟ್ಟಿಲ್ಲ.
ರೆಹಾನಾ ಅವರ ಮಗಳು ಟುಲಿಪ್ ಸಿದ್ದಿಕ್ ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ. ಖಜಾನೆಗೆ ಆರ್ಥಿಕ ಕಾರ್ಯದರ್ಶಿ ಮತ್ತು ಹ್ಯಾಂಪ್ ಸ್ಟೆಡ್ ಮತ್ತು ಹೈಗೇಟ್ ಗೆ ಲೇಬರ್ ಸಂಸದರಾಗಿದ್ದಾರೆ.
ಯಾರಿಗಾದರೂ ಆಶ್ರಯ ಅಥವಾ ತಾತ್ಕಾಲಿಕ ಆಶ್ರಯ ಪಡೆಯಲು ಪ್ರಯಾಣಿಸಲು ಅನುಮತಿಸಲು ವಲಸೆ ನಿಯಮಗಳಲ್ಲಿ ಯಾವುದೇ ಅವಕಾಶವಿಲ್ಲ ಎಂದು ಯುಕೆ ಸ್ಪಷ್ಟಪಡಿಸಿದೆ. ಅಂತರರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವವರು ತಾವು ತಲುಪುವ ಮೊದಲ ಸುರಕ್ಷಿತ ದೇಶದಲ್ಲಿ ಆಶ್ರಯ ಪಡೆಯಬೇಕು. ಅದು ಸುರಕ್ಷತೆಯ ವೇಗವಾದ ಮಾರ್ಗವಾಗಿದೆ ಎಂದು ಯುಕೆ ಹೇಳಿದೆ.