ಮದುವೆ ಬಗ್ಗೆ ಕನಸು ಕಾಣೋದು ಸಹಜ. ಆಕೆ ಕೂಡ ತನ್ನ ಮದುವೆ ಬಗ್ಗೆ ಕನಸು ಕಂಡಿದ್ದಳು. ವೈಟ್ ಎಂಡ್ ವೈಟ್ ಗೌನ್ ಹಾಕಿಕೊಂಡು ತನ್ನ ಕನಸಿನ ರಾಜಕುಮಾರನನ್ನ ವರಿಸಿಕೊಂಡಿದ್ದಳು. ಇನ್ನೇನು ಮದುವೆ ಸಮಾರಂಭ ಮುಗಿಯಿತು. ಮನೆಗೆ ಹೊರಡುವ ಸಮಯದಲ್ಲೇ ಆಕೆಯ ಕೈಗೆ ಸಿಕ್ಕಿ ಬಿದ್ದಿದ್ದ ಬ್ಯಾಡ್ ಬಾಯ್. ಅದೇ ನೋಡಿ ಈ 23 ಕೆಜಿಯ ಡ್ರಮ್ ಫಿಶ್.
ಮದುವೆ ದಿನ ಸ್ಪೆಶಲ್ ಮಾಡಲು ಏನಾದರೂ ವಿಭಿನ್ನವಾಗಿ ಮಾಡೋಣ ಅಂತ ಈ ಅಮೆರಿಕನ್ ವಧು ಎಲಿಯಟ್ ವ್ಯಾಗನರ್ ವಿಲ್ಲೆ ನಿರ್ಧಾರ ಮಾಡುತ್ತಾಳೆ. ಮದುಮಗ ವೆಲ್ ಕೂಡಾ ಒಪ್ಪಿಕೊಳ್ಳುತ್ತಾನೆ. ಆಗ ಇಬ್ಬರು ನವವಿವಾಹಿತರು ಅಲ್ಲೇ ಹತ್ತಿರದಲ್ಲಿದ್ದ ಕಡಲ ತೀರಕ್ಕೆ ಹೋಗಿ ಫಿಶ್ಶಿಂಗ್ ಮಾಡಲು ನಿರ್ಧಾರ ಮಾಡುತ್ತಾರೆ.
BIG NEWS: ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣು
ಮದುವೆ ಉಡುಗೆಯಲ್ಲೇ ಕಡಲ ತೀರಕ್ಕೆ ಹೋದ ಈ ಹೊಸ ಜೋಡಿ, ಮೀನು ಹಿಡಿಯಲು ಮೀನಿನ ಗಾಳವನ್ನ ಹಾಕುತ್ತಾರೆ. ಸರಿಯಾಗಿ 45ನಿಮಿಷದ ನಂತರ ಮದುಮಗಳ ಗಾಳ ಎಳೆದಂತಾಗುತ್ತೆ. ತಕ್ಷಣವೇ ಆಕೆ ಅದನ್ನ ಎಳೆದಿದ್ದಾಳೆ. ಆಗ ಕಂಡುಬಂದ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಕಾರಣ ಆಕೆ ಹಾಕಿದ್ದ ಗಾಳಕ್ಕೆ ಸಿಕ್ಕಿದ್ದು ಬರೋಬ್ಬರಿ 23 ಕೆಜಿಯ ಡ್ರಮ್ ಫಿಶ್.
ಈ ದೈತ್ಯ ಮೀನು ಹಿಡಿದುಕೊಂಡಿರೋ ಫೋಟೋ ಫೇಸ್ಬುಕ್ಗೆ ಹಾಕಿಕೊಂಡಿರೋ ಎಲಿಯಟ್ ‘ನನ್ನ ಮದುವೆಯ ಮೊದಲ ರಾತ್ರಿಯಲ್ಲಿ ಸಿಕ್ಕಿಬಿದ್ದ ಈ ಬ್ಯಾಡ್ಬಾಯ್’ ಅನ್ನೊ ಕಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋ ನೆಟ್ಟಿಗರಿಗೆ ಸಖತ್ ಫನ್ನಿ ಅನಿಸಿದೆ. ಎಲ್ಲರೂ ಮದುಮಗಳ ಈ ಪೋಟೋಗೆ ಫನ್ನಿ ಫನ್ನಿ ಕಾಮೆಂಟ್ ಹಾಕುತ್ತಿದ್ದಾರೆ.