ಸ್ಟೇಜ್ ಶೋ ಮೇಲೆ ಪ್ರದರ್ಶನ ನೀಡುವ ವೇಳೆ ಮನೋಯಿಚ್ಛೆ ಕುಣಿಯುವ ಭರದಲ್ಲಿ ಅಭಿಮಾನಿಯೊಬ್ಬರ ಮುಖದ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಅಮೆರಿಕದ ರಾಕ್ ಬ್ಯಾಂಡ್ ಬ್ರಾಸ್ ಅಗೇಂಸ್ಟ್ ಮುಂಚೂಣಿ ಗಾಯಕಿ ಸೋಫಿಯಾ ಉರಿಸ್ಟಾ ಇದೀಗ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.
ಫ್ಲಾರಿಡಾದ ಡೇಟೋನಾದ ರಾಕ್ವಿಲ್ ಮೆಟಲ್ ಫೇಸ್ಟಿವಲ್ ಕಾರ್ಯಕ್ರಮದ ವೇಳೇ ವೇದಿಕೆ ಮೇಲೆ ಅಂಗಾತ ಮಲಗಿದ್ದ ತಮ್ಮ ಅಭಿಮಾನಿಯೊಬ್ಬರ ಮುಖದ ಮೇಲೆ ತಮ್ಮ ಪ್ಯಾಂಟ್ ಕೆಳಗೆಳೆದು ಮೂತ್ರ ವಿಸರ್ಜನೆ ಮಾಡಿದ ಸೋಫಿಯಾಳ ವಿಡಿಯೋ ಎಲ್ಲೆಡೆ ವೈರಲ್ ಆಗಿ ನೆಟ್ಟಿಗರಿಗೆ ಶಾಕ್ ನೀಡಿತ್ತು.
ರೇಜ್ ಅಗೇಂಸ್ಟ್ ದಿ ಮಷೀನ್ಸ್ ವೇಕ್ ಅಪ್ ಎನ್ನುವ ಹಾಡಿಗೆ ಪ್ರದರ್ಶನ ನೀಡುತ್ತಿದ್ದ ವೇಳೆ ವೇದಿಕೆ ಮೇಲೆ ತನ್ನ ಅಭಿಮಾನಿಯೊಬ್ಬರಿಗೆ ಬರಲು ಕೋರಿದ ಉರಿಸ್ಟಾ, “ನಾನೀಗ ಮೂತ್ರ ವಿಸರ್ಜಿಸುತ್ತೇನೆ, ಅದಕ್ಕೆ ಬಾತ್ರೂಂಗೆ ಹೋಗಲು ಆಗೋದಿಲ್ಲ. ಹಾಗಾಗಿ ಅದರಲ್ಲೂ ಒಂದು ಶೋ ಮಾಡಬಹುದೇನೋ,” ಎಂದು ನೆರೆದಿದ್ದ ಸಭಿಕರಿಗೆ ಹೇಳುತ್ತಲೇ ಈ ಕುಕೃತ್ಯವೆಸಗಿದ್ದಾಳೆ.
ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ..! ನಿಮ್ಮ ನಗರದಿಂದಲೂ ವಿದೇಶಕ್ಕೆ ಹಾರಲಿದೆ ವಿಮಾನ
ಘಟನೆ ವಿಡಿಯೋ ಕಂಡ ನೆಟ್ಟಿಗರು ಆಕೆಗೆ ಛೀಮಾರಿ ಹಾಕಿ ಇದು ಅತಿರೇಕದ ಪರಮಾವಧಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ತನ್ನ ಈ ಅತಿಯಾದ ವರ್ತನೆಗೆ ಕ್ಷಮೆಯಾಚಿಸಿದ ಉರಿಸ್ಟಾ, “ನಾನು ಯಾವಾಗಲೂ ಮಿತಿಗಳನ್ನು ಇನ್ನಷ್ಟು ಎತ್ತರಿಸಲು ನೋಡುತ್ತೇನೆ. ಆದರೆ ಆ ರಾತ್ರಿ ಬಹಳವೇ ಮಿತಿ ಮೀರಿಬಿಟ್ಟೆ. ನಾನು ನನ್ನ ಕುಟುಂಬ, ಬ್ಯಾಂಡ್ ಹಾಗೂ ಅಭಿಮಾನಿಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ನಾನು ಮಾಡಿದ ಕೆಲಸದಿಂದ ಕೆಲವರಿಗೆ ನೋವಾಗಿದೆ ಎಂದು ನನಗೆ ಅರಿವಾಗಿದೆ. ನಾನು ಅವರಿಗೆ ಕ್ಷಮೆಯಾಚಿಸಿ, ಅವರಿಗೆ ನೋವುಂಟು ಮಾಡಲು ಹಾಗೆ ಮಾಡಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ,” ಎಂದು ಟ್ವಿಟರ್ನಲ್ಲಿರುವ ತನ್ನ ಹ್ಯಾಂಡಲ್ನಲ್ಲಿ ಬರೆದುಕೊಂಡಿದ್ದಾಳೆ.