ವಿಮಾನ ನಿಲ್ದಾಣದಲ್ಲಿ ಲಗ್ಗೇಜ್ ಇಳಿಸುವಾಗ ಕನ್ವೇಯರ್ ಬೆಲ್ಟ್ನಲ್ಲಿ ಸಿಕ್ಕಿಹಾಕಿಕೊಂಡು ಮಹಿಳೆ ಮೃತರಾದ ಘಟನೆ ಯುಎಸ್ನ ಲೂಸಿಯಾನದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆಕೆ ಸಾಮಾನು ಸರಂಜಾಮು ಹ್ಯಾಂಡ್ಲರ್ ಆಗಿದ್ದು, ಆಕೆಯ ಕೂದಲು ಸಿಕ್ಕಿಕೊಂಡಿತ್ತು. ನಂತರ ಅವಘಡ ಸಂಭವಿಸಿ ಆ.30ರಂದು ಮೃತರಾದರು. ಆ ಬ್ಯಾಗೇಜ್ ಹ್ಯಾಂಡ್ಲರ್ ಫ್ರಾಂಟಿಯರ್ ಏರ್ಲೈನ್ಸ್ ವಿಮಾನದಿಂದ ಬ್ಯಾಗ್ಗಳನ್ನು ಇಳಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
26 ವರ್ಷದ ಜೆರ್ಮಾನಿ ಥಾಂಪ್ಸನ್ ಅವರು ಆಗಸ್ಟ್ 30ರಂದು ರಾತ್ರಿ 10 ಗಂಟೆಯ ಸುಮಾರಿಗೆ ಅಪಘಾತಕ್ಕೊಳಗಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆಕೆಯ ತಾಯಿ ಏಂಜೆಲಾ ಡಾರ್ಸೆ ಮಾತನಾಡಿ, ಜೆರ್ಮನಿ ತನ್ನ ಕಾಲೇಜು ದಿನಗಳಲ್ಲಿ ಬಾಸ್ಕೆಟ್ಬಾಲ್ ಚಾಂಪಿಯನ್ ಆಗಿದ್ದರು. ಸಮಾಜಶಾಸ್ತ್ರದಲ್ಲಿ ಬ್ಯಾಚುಲರ್ ಮಾಡಿದ್ದಳು. ಈ ಭೀಕರ ಅಪಘಾತ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ ಎಂದಿದ್ದಾರೆ.
ಅಪಘಾತದ ಕೆಲವು ಗಂಟೆಗಳ ಮೊದಲು, ತನ್ನ ಜೊತೆ ಮಾತನಾಡಿದ್ದಳು. ಈಗ ನನಗೆ ನಂಬಲಾಗುತ್ತಿಲ್ಲ, ನನ್ನ ಒಬ್ಬಳೇ ಮಗಳು ನನ್ನ ಬಿಟ್ಟು ಹೋಗಿದ್ದಾಳೆ ಎಂದು ಶೋಕತಪ್ತರಾಗಿ ಹೇಳಿದ್ದಾರೆ.
ಕೆಲಸದಲ್ಲಿ ಯಾವುದೇ ಅವಘಡ ತಪ್ಪಿಸಲು ಉದ್ದನೆಯ ಕೂದಲನ್ನು ಮುಂದಕ್ಕೆ ಹಾಕಿಕೊಳ್ಳಬಾರರು, ಕುತ್ತಿಗೆಯಿಂದ ಹಿಂತೆಗೆದುಕೊಂಡಿರಬೇಕೆಂದು ಹ್ಯಾಂಡ್ಬುಕ್ ನಿಯಮಗಳಲ್ಲಿತ್ತು, ಆಕೆ ಆ ನಿಯಮ ಉಲ್ಲಂಘಿಸಿದ್ದಾರೆ. ಫ್ರಾಂಟಿಯರ್ ಏರ್ಲೈನ್ಸ್ ಆಗಸ್ಟ್ 31 ರಂದು ವಿಮಾನ ಸಂಚಾರ ರದ್ದುಗೊಳಿಸುವ ಮೂಲಕ ಮೃತರಿಗೆ ಸಂತಾಪ ಸೂಚಿಸಿದೆ.