ಚಳಿಗಾಳದ ಬಿರುಗಾಳಿಯಿಂದಾಗಿ ಯುಎಸ್ ನ 10 ರಾಜ್ಯಗಳಲ್ಲಿ ಸಾವಿನ ಸಂಖ್ಯೆ 55 ಕ್ಕೆ ಏರಿದೆ, ಎರಡೂ ಕರಾವಳಿಗಳನ್ನು ಅಪ್ಪಳಿಸಲು ಸಿದ್ಧವಾಗಿರುವ ಚಳಿಗಾಲದ ಬಿರುಗಾಳಿ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಹೆಚ್ಚಿನ ಎಚ್ಚರಿಕೆ ವಹಿಸಿದೆ.
ಅತ್ಯಂತ ಶೀತ ಗಾಳಿ ಮತ್ತು ಸತತ ಬಿರುಗಾಳಿಗಳ ಹವಾಮಾನ ಸಂಬಂಧಿತ ಘಟನೆಗಳಿಂದಾಗಿ ಟೆನ್ನೆಸ್ಸಿಯಲ್ಲಿ ಮಾತ್ರ 14 ಸಾವುಗಳು ವರದಿಯಾಗಿದ್ದು, ಉಳಿದ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿರುವ ಸಂಖ್ಯೆ 55 ಕ್ಕೆ ಏರಿದೆ ಎಂದು ಸಿಎನ್ಎನ್ ವರದಿ ತಿಳಿಸಿದೆ.
ಈ ವಾರ, ಆರ್ಕ್ಟಿಕ್ ವಾಯು ಸಮೂಹವು ರಾಷ್ಟ್ರದಾದ್ಯಂತ ದಕ್ಷಿಣ ಮತ್ತು ಪೂರ್ವಕ್ಕೆ ಬೀಸುತ್ತಿದ್ದಂತೆ, ಸರಿಸುಮಾರು 150 ಮಿಲಿಯನ್ ಅಮೆರಿಕನ್ನರು ಅಪಾಯಕಾರಿ ಶೀತ ಮತ್ತು ಗಾಳಿಯ ಆತಂಕದಲ್ಲಿದ್ದಾರೆ.