ಅಮೆರಿಕಾದ ಉತ್ತರ ಕೆರೋಲಿನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. 24 ವರ್ಷದ ಯುವತಿ ಹಲ್ಲುಗಳು ಯಾವುದೇ ಕಾರಣವಿಲ್ಲದೆ ಮುರಿದಿವೆ. ಬ್ರೂಕ್ ಜಾನ್ಸನ್ ಹೆಸರಿನ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಹಲ್ಲು ಮುರಿದ ನಂತ್ರ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾಳೆ.
ಹಲ್ಲು ಮುರಿದ ನಂತ್ರ ಮನಸ್ಸು ಬಿಚ್ಚಿ ನಗಲು ಸಾಧ್ಯವಾಗ್ತಿಲ್ಲ. ನನಗೆ ನನ್ನ ನಗು ಬಹಳ ಮುಖ್ಯವಾಗಿತ್ತು. ನನ್ನ ನಗು ಸದಾ ಪ್ರಶಂಸೆಗೆ ಪಾತ್ರವಾಗ್ತಿತ್ತು. ಆದ್ರೀಗ ಹಲ್ಲು ಬಿದ್ದಿದ್ದು, ಆತ್ಮವಿಶ್ವಾಸ ಕಡಿಮೆಯಾಗ್ತಿದೆ ಎಂದು ಆಕೆ ನೋವು ತೋಡಿಕೊಂಡಿದ್ದಾಳೆ. ಜಾನ್ಸನ್ 16ನೇ ವಯಸ್ಸಿನಲ್ಲಿಯೇ ಈ ಸಮಸ್ಯೆಗೆ ತುತ್ತಾಗಿದ್ದಳು. ಒಂದೊಂದಾಗಿ ಎಲ್ಲ ಹಲ್ಲುಗಳು ಬಿದ್ದವು.
ಹಲ್ಲುಗಳು ಜಾನ್ಸನ್ ಕೆಲಸಕ್ಕೂ ತೊಂದರೆ ತಂದಿವೆ. ಆಕೆ ಸ್ನೇಹಿತರು ಸಹಾಯದ ಪೇಜ್ ಒಂದನ್ನು ಶುರು ಮಾಡಿದ್ದಾರೆ. ಅದ್ರಲ್ಲಿ ಸಂಗ್ರಹವಾದ ಹಣದಿಂದ ಚಿಕಿತ್ಸೆ ಮಾಡಿಸುವ ಪ್ರಯತ್ನದಲ್ಲಿದ್ದಾರೆ. ಈವರೆಗೆ 4.98 ಲಕ್ಷ ರೂಪಾಯಿ ಸಹಾಯ ಧನ ಸಿಕ್ಕಿದೆ. ಕೆಲವೇ ವಾರಗಳಲ್ಲಿ ನನ್ನ ಹಲ್ಲುಗಳು ಹಿಂತಿರುಗಲಿದೆ ಎಂದು ಜಾನ್ಸನ್ ಮೆಸ್ಸೇಜ್ ಮಾಡಿದ್ದಾಳೆ.