ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ವಾಸಿಸುವ ಹುಡುಗಿ ಎರಡು ಗರ್ಭಾಶಯ ಹೊಂದಿರುವ ಸುದ್ದಿ ಹೊರ ಬಂದಿದೆ. ಹುಡುಗಿ ಎರಡು ಯೋನಿಗಳು, ಎರಡು ಗರ್ಭಕೋಶ ಮತ್ತು ಎರಡು ಗರ್ಭಕಂಠಗಳನ್ನು ಹೊಂದಿದ್ದಾಳೆ. ಈ ಅಪರೂಪದ ದೈಹಿಕ ಸ್ಥಿತಿಯಿಂದಾಗಿ 20 ವರ್ಷದ ಹುಡುಗಿ ಸಮಸ್ಯೆ ಎದುರಿಸುತ್ತಿದ್ದಾಳೆ.
ಅಮೆರಿಕದ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ನಿವಾಸಿ 20 ವರ್ಷದ ಪೈಗೆ ಡಿ ಏಂಜೆಲೊ ಎರಡು ಗರ್ಭಾಶಯ ಹೊಂದಿದ್ದಾಳೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಗರ್ಭಾಶಯದ ಡಿಡೆಲ್ಫಿಸ್ ಎಂದು ಕರೆಯಲಾಗುತ್ತದೆ. ವರದಿಯ ಪ್ರಕಾರ, ಎರಡು ಗರ್ಭಾಶಯದಿಂದಾಗಿ ಪೈಗೆ ಡಿ ಏಂಜೆಲೊ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಡಿ ಏಂಜೆಲೊಗೆ ತಿಂಗಳಲ್ಲಿ ಎರಡು ಬಾರಿ ಮುಟ್ಟಿನ ಸಮಸ್ಯೆ ಎದುರಿಸುತ್ತಾಳೆ. ಅವಳು ಎರಡೂ ಗರ್ಭಾಶಯದಲ್ಲಿ ಒಂದೇ ಸಮಯದಲ್ಲಿ ಗರ್ಭಿಣಿಯಾಗಬಹುದು. ಆಕೆ ಎರಡೂ ಗರ್ಭಾಶಯ ಆರೋಗ್ಯವಾಗಿದೆ.
ಪೈಗೆ ಡಿ ಏಂಜೆಲೊಗೆ 18 ವರ್ಷದವರೆಗೆ ಈ ಅಪರೂಪದ ದೈಹಿಕ ಸಮಸ್ಯೆ ಬಗ್ಗೆ ತಿಳಿದಿರಲಿಲ್ಲ. 2 ವರ್ಷಗಳ ಹಿಂದೆ ಸ್ತ್ರೀರೋಗತಜ್ಞರ ಬಳಿ ಹೋದಾಗ ಇದು ಬಹಿರಂಗವಾಗಿದೆ.