ನ್ಯೂ ಓರ್ಲಿಯನ್ಸ್: ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್ ನಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದ ಜನರ ಮೇಲೆ ಕಾರ್ ಹರಿದು 10 ಜನರು ಸಾವನ್ನಪ್ಪಿದ್ದಾರೆ. 30 ಜನರು ಗಾಯಗೊಂಡಿದ್ದಾರೆ.
ನಗರದ ಫ್ರೆಂಚ್ ಕ್ವಾರ್ಟರ್ ನಲ್ಲಿರುವ ಬೌರ್ಬನ್ ಸ್ಟ್ರೀಟ್‌ನಲ್ಲಿ ವಾಹನವೊಂದು ಜನಸಂದಣಿಯತ್ತ ನುಗ್ಗಿತು. ಈ ಅಪಘಾತವು 10 ಸಾವುಗಳಿಗೆ ಕಾರಣವಾಗಿದೆ.
ಸುಮಾರು 3:15 ಗಂಟೆಗೆ ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್ ಮತ್ತು ಐಬರ್‌ವಿಲ್ಲೆ ಬಳಿ SUV ಪಾದಚಾರಿಗಳಿಗೆ ಅಪ್ಪಳಿಸಿತು. ಬೌರ್ಬನ್ ಸ್ಟ್ರೀಟ್ ಅನ್ನು ನಿರ್ಬಂಧಿಸಲಾಗಿದೆ. ತುರ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.ಘಟನೆಯ ಬಳಿಕ, ಚಾಲಕನು ವಾಹನದಿಂದ ಇಳಿದು ಗುಂಡು ಹಾರಿಸಲು ಪ್ರಾರಂಭಿಸಿದನು ಮತ್ತು ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮ ಸೈಟ್ X ನಲ್ಲಿನ ವರದಿಗಳು ಅಪಘಾತದಲ್ಲಿ ಕನಿಷ್ಠ 10 ಅಥವಾ ಅದಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದೆ.
BREAKING: Multiple people dead after a car plowed into a group of people on Bourbon Street in New Orleans pic.twitter.com/m37plAgeNv
— Insider Paper (@TheInsiderPaper) January 1, 2025
🚨💔 BREAKING: Horror unfolds in the heart of the French Quarter, New Orleans.
A pickup truck slammed into a crowd during New Year’s celebrations, killing at least 10 people and injuring several others. A night of joy turned into a devastating tragedy. 🌙💔
Our hearts go out to… pic.twitter.com/4WubTfofs6
— SENO ♥︎ (@Seno_Vibes) January 1, 2025