ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಪಂದ್ಯದ (ಅಕ್ಟೋಬರ್ 15) ವೇಳೆ ತನ್ನ ದುಬಾರಿ ಐಫೋನ್ ಕಳೆದುಕೊಂಡಿದ್ದೇನೆ ಎಂದು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೇಳಿಕೊಂಡಿದ್ದರು. ಇದಾದ ನಾಲ್ಕು ದಿನಗಳ ನಂತರ, ನಟಿ ಈಗ ಅದನ್ನು ಕದ್ದ ವ್ಯಕ್ತಿಯಿಂದ ಸ್ವೀಕರಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ತನ್ನ ಐಫೋನ್ ಹಿಂತಿರುಗಿಸಿದರೆ ಬಹುಮಾನ ನೀಡುವುದಾಗಿ ಹೇಳಿದ ನಂತರ ನಟಿಯ ಫೋನ್ ಪತ್ತೆಯಾಗಿದೆ ಎಂಬ ಇಮೇಲ್ ಬಂದಿತ್ತು. ನಿಮ್ಮ ಫೋನ್ ನನ್ನ ಬಳಿ ಇದೆ. ಅದು ನಿಮಗೆ ಬೇಕಾದರೆ, ನನ್ನ ಸಹೋದರನನ್ನು ಕ್ಯಾನ್ಸರ್ ನಿಂದ ರಕ್ಷಿಸಲು ನೀವು ನನಗೆ ಸಹಾಯ ಮಾಡಬೇಕು ಎಂದು ಸಂದೇಶವನ್ನು ಬರೆಯಲಾಗಿದೆ. ಊರ್ವಶಿ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಥಂಬ್ಸ್ ಅಪ್ ಎಮೋಟಿಕಾನ್‌ನೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ನಟಿ ಏನನ್ನೂ ಬರೆದುಕೊಂಡಿಲ್ಲ.
ಅಂದಹಾಗೆ, ಭಾನುವಾರ ಊರ್ವಶಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ನಿಜವಾದ ಚಿನ್ನದ ಐ ಫೋನ್ ಕಳೆದುಹೋಗಿದೆ. ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ಶೀಘ್ರದಲ್ಲೇ ನನ್ನನ್ನು ಸಂಪರ್ಕಿಸಿ ಎಂದು ಬರೆದಿದ್ದರು. ಮಂಗಳವಾರ, ನಟಿ ತನ್ನ ಫೋನ್ ಮರಳಿಸಿದ್ರೆ ಬಹುಮಾನ ನೀಡುವುದಾಗಿ ಹೇಳಿದ್ದರು.
ವರದಿ ಪ್ರಕಾರ, ಊರ್ವಶಿಯ ಫೋನ್ ಅವರು ಕ್ರೀಡಾಂಗಣದಲ್ಲಿದ್ದಾಗ ಆಕೆಯ ಅಂಗರಕ್ಷಕನ ಜೇಬಿನಲ್ಲಿತ್ತು. ಬಹಳಷ್ಟು ಮಂದಿ ನಟಿ ಊರ್ವಶಿ ಬಳಿ ಫೋಟೋಗಳನ್ನು ಕ್ಲಿಕ್ಕಿಸಲು ಜಮಾಯಿಸಿದ್ರು. ಈ ವೇಳೆ ಯಾರೋ ಅಂಗರಕ್ಷಕನ ಜೇಬಿನಿಂದ ಫೋನ್ ತೆಗೆದಿರಬಹುದು ಎನ್ನಲಾಗಿದೆ. ಇದು 24 ಕ್ಯಾರೆಟ್ ಚಿನ್ನದಿಂದ ಕೂಡಿದ ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ನಟಿ ಹೊಂದಿದ್ದರು. ಫೋನ್ ಅನ್ನು ವಿಶೇಷವಾಗಿ ಕಸ್ಟಮೈಸ್ ಮಾಡಿದ್ದರಿಂದ ತುಂಬಾ ದುಬಾರಿಯಾಗಿದೆ.