ಮುಂಬೈ: ಸಿನಿಮಾಗಿಂತಲೂ ವಿಚಿತ್ರ ಬಟ್ಟೆಗಳಿಂದಲೇ ಸದಾಕಾಲ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಳನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿತ್ತು. ತುಂಡುಡುಗೆ ಧರಿಸಿ ವಿವಾದಕ್ಕೀಡಾದ ಉರ್ಫಿ ಜಾವೇದ್ ಳನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ಯುತ್ತಿರುವ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಇದು ಕೂಡ ಉರ್ಫಿ ಡ್ರಾಮಾ ಆಗಿದ್ದು, ಪ್ರಚಾರಕ್ಕಾಗಿ ಉರ್ಫಿ ಇಂತದ್ದೊಂದು ನಾಟಕವಾಡಿದ್ದಾರೆ ಎಂಬ ಸಂಗತಿ ಈಗ ಬಯಲಾಗಿದೆ.
ಉರ್ಫಿ ಜಾವೇದ್ ಳನ್ನು ಪೊಲೀಸರು ವಶಕ್ಕೆ ಪಡೆದಿದ್ದ ವಿಡಿಯೋ ನಿನ್ನೆಯಷ್ಟೇ ಭಾರಿ ಸುದ್ದಿಯಾಗಿತ್ತು. ಆದರೆ ಈ ದೃಶ್ಯ ಪ್ರಚಾರಕ್ಕಾಗಿ ಉರ್ಫಿ ಮಾಡಿದ ಹೊಸ ನಾಟಕ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಓಶಿವಾರ ಪೊಲೀಸರು ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ನಾಲ್ವರು ನಕಲಿ ಪೊಲೀಸರನ್ನು ಬಂಧಿಸಿದ್ದಾರೆ.
ನಕಲಿ ವಿಡಿಯೋ ಮಾಡಿ ಮುಂಬೈ ಪೊಲೀಸರ ಮಾನಹಾನಿ ಮಾಡಿದ್ದಕ್ಕಾಗಿ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಉರ್ಫಿ ಜಾವೇದ್ ವಿರುದ್ಧವೂ ಓಶಿವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಚಿತ್ರೀಕರಣದ ವೇಳೆ ಬಳಸಲಾಗಿದ್ದ ಕಾರನ್ನೂ ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಉರ್ಫಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.