ಅತ್ಯಂತ ಕಡಿಮೆ ಬಟ್ಟೆಯಿಂದ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್. ತನ್ನ ಇಡೀ ದೇಹವನ್ನು ಕಾಣಿಸುವ ಬಟ್ಟೆಯನ್ನೂ ಈಕೆ ತೊಟ್ಟು ಫೋಟೋ, ವಿಡಿಯೋಗೆ ಪೋಸ್ ನೀಡಿದ್ದು ಇದೆ. ಇದೇ ಕಾರಣಕ್ಕೆ ಈಕೆ ಸ್ವಲ್ಪ ಬಟ್ಟೆ ಹಾಕಿಕೊಂಡರೂ ಅದು ಹೊಸ ವಿಷಯವೇ ಅಲ್ಲ ಎನ್ನಿಸುವಷ್ಟರ ಮಟ್ಟಿಗೆ ಬಂದಿದೆ.
ಸದಾ ಸುದ್ದಿಯಲ್ಲಿ ಇರಬೇಕೆಂದು ಇಂಥದ್ದೊಂದು ತಂತ್ರವನ್ನು ಅನುಸರಿಸಿರುವ ಉರ್ಫಿ ಈಗ ಬಟ್ಟೆಯಿಂದಲೇ ಮತ್ತೆ ಮುನ್ನೆಲೆಗೆ ಬಂದಿದ್ದಾಳೆ.
ಕಪ್ಪು ಪಟ್ಟಿಗಳಲ್ಲಿ ತನ್ನ ಖಾಸಗಿ ಅಂಗವನ್ನು ಮಾತ್ರ ಮುಚ್ಚಿಕೊಂಡು ವಿಡಿಯೋಗೆ ಪೋಸ್ ಕೊಟ್ಟಿದ್ದಾಳೆ.
ಇನ್ಸ್ಟಾಗ್ರಾಮ್ನಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಎಂದಿನಂತೆ, ಅವಳ ಇಷ್ಟದಂತೆಯೇ ಈ ಬಾರಿಯೂ ಟ್ರೋಲ್ ಮೂಲಕ ಮತ್ತೆ ಉರ್ಫಿ ಪ್ರಸಿದ್ಧಿಗೆ ಬಂದಿದ್ದಾಳೆ. ಈಕೆಯ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿ ಸೋಲದವರು ಪುನಃ ಇದರ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ಕೂಡ ಬಟ್ಟೆಯ ವಿಷಯವಾಗಿ ಉರ್ಫಿ ವಿರುದ್ಧ ದೂರು ದಾಖಲಾಗಿದ್ದು ಇದೆ. ಉರ್ಫಿ ಜಾವೇದ್ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ‘ಕಾನೂನುಬಾಹಿರ ಮತ್ತು ಅಶ್ಲೀಲ ಕೃತ್ಯಗಳನ್ನು’ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.
ಇದರ ವಿರುದ್ಧ ಉರ್ಫಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನನ್ನ ದೇಹ. ದೂರು ದಾಖಲು ಮಾಡುವುದು, ನಿನ್ನ ರೇಪ್ ಮಾಡುತ್ತೇವೆ, ಕೊಲೆ ಮಾಡುತ್ತೇವೆ ಎಂದೂ ಹಲವರು ಕಮೆಂಟ್ ಮಾಡಿರುವುದು ನನಗೆ ಅಚ್ಚರಿ ತಂದಿದೆ ಎಂದು ಹೇಳಿಕೆ ಕೊಟ್ಟಿದ್ದಾಳೆ.