ಉದ್ದನೆ ಗಡ್ಡದೊಂದಿಗೆ ಕಾಣಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೊಸ ಸ್ಟೈಲ್‌ನಿಂದ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರಿಗೆ ಪ್ರಧಾನಿಯವರ ಗಡ್ಡದ ಲುಕ್ ಯಾಕೋ ಸರಿಯಾಗಿ ಕಾಣುತ್ತಿಲ್ಲವೆಂದು ತೋರುತ್ತದೆ.
ಮಹಾರಾಷ್ಟ್ರದ ಬಾರಾಮತಿಯ ಚಹಾ ವ್ಯಾಪಾರಿಯೊಬ್ಬರು ಪ್ರಧಾನಿಗೆ ತಮ್ಮ ಗಡ್ಡ ಶೇವ್ ಮಾಡಿಸಿಕೊಳ್ಳಲು 100 ರೂ.ಗಳನ್ನು ಕಳುಹಿಸಿದ್ದಾರೆ.
ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲ ಚಟುವಟಿಕೆಗಳ ಮೇಲೂ ಪರಿಣಾಮವಾಗಿದ್ದು, ಲಾಕ್‌ಡೌನ್ ಕಾರಣದಿಂದ ಅಸಂಘಟಿಕ ಕ್ಷೇತ್ರದ ಉದ್ಯಮಗಳು ಭಾರೀ ತೊಂದರೆಗೆ ಸಿಲುಕಿವೆ. ಕೋವಿಡ್ ಎರಡನೇ ಅಲೆಯ ಅವಧಿಯಲ್ಲಿ ಈ ಸಮಸ್ಯೆಗಳು ಇನ್ನಷ್ಟು ಉಲ್ಪಣಗೊಂಡಿವೆ.
ಉದ್ಯೋಗಿಗಳಿಗೆ ತಿಳಿದಿರಲಿ ಪಿಎಫ್ ಕುರಿತ ಈ 5 ಮಾಹಿತಿ
ಇದರಿಂದ ಬೇಸತ್ತ ಅನಿಲ್ ಮೋರೆ, “ಪ್ರಧಾನಿ ಮೋದಿ ತಮ್ಮ ಗಡ್ಡ ಬೆಳೆಸಿದ್ದಾರೆ. ಅವರು ಏನಾದರೂ ಹೆಚ್ಚಿಸಬೇಕಾದಲ್ಲಿ, ಅದು ಈ ದೇಶದ ಜನತೆಗೆ ಉದ್ಯೋಗಾವಕಾಶಗಳನ್ನ. ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಿಸಲು ಸೂಕ್ತ ಕ್ರಮಗಳನ್ನು ಪ್ರಧಾನಿ ತೆಗೆದುಕೊಳ್ಳಬೇಕು” ಎಂದು ತಿಳಸಿದ್ದಾರೆ.
ಪುಟ್ಟದೊಂದು ಚಹಾ ಅಂಗಡಿಯ ಮಾಲೀಕರಾದ ಅನಿಲ್ ಮೋರೆಗೆ ಲಾಕ್‌ಡೌನ್ ಕಾರಣದಿಂದಾಗಿ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ.
ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾದ ಸೋನು ಸೂದ್
ಪ್ರಧಾನಿಯ ಹುದ್ದೆ ಬಗ್ಗೆ ತಮಗೆ ಅಪಾರ ಗೌರವವಿರುವುದಾಗಿ ತಿಳಿಸಿದ ಅನಿಲ್, ತಮ್ಮ ಉಳಿತಾಯದಿಂದ 100 ರೂಪಾಯಿಗಳನ್ನು ಅವರ ಶೇವಿಂಗ್‌ಗೆಂದು ಕಳುಹಿಸಿದ್ದಾಗಿ ತಿಳಿಸಿದ್ದು, ಇದರ ಹಿಂದೆ ಅವರನ್ನು ಅಣಕಿಸುವ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.