ನವದೆಹಲಿ: ನಿಗದಿಯಾಗಿರುವಂತೆ ಜನವರಿ 7, 8, 9, 15 ಮತ್ತು 16 ರಂದು ಯುಪಿಎಸ್ಟಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು/ ಪರೀಕ್ಷಾ ಕಾರ್ಯನಿರ್ವಹಣೆ ಸಿಬ್ಬಂದಿ ಸುಗಮ ಸಂಚಾರಕ್ಕೆ ಯುಪಿಎಸ್ಸಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಪರಿಸ್ಥಿತಿ ಪರಿಶೀಲಿಸಿದ ನಂತರ, ಕೇಂದ್ರ ಲೋಕ ಸೇವಾ ಆಯೋಗ 2021 ರ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಯನ್ನು ನಿಗದಿಪಡಿಸಿದ ಪ್ರಕಾರ ಅಂದರೆ, 2022 ಜನವರಿ 7, 8, 9, 15 ಮತ್ತು 16 ರಂದು ನಡೆಸಲು ನಿರ್ಧರಿಸಿದೆ.
ಸೋಂಕು ತಡೆಗೆ ಸರ್ಕಾರಗಳು ವಿಧಿಸುತ್ತಿರುವ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳಿಗೆ/ ಪರೀಕ್ಷಾ ಕಾರ್ಯನಿರ್ವಾಹಕರಿಗೆ, ವಿಶೇಷವಾಗಿ ಕಂಟೈನ್ಮೆಂಟ್/ ಮೈಕ್ರೋ ವಲಯದಿಂದ ಬರುವವರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಅಭ್ಯರ್ಥಿಗಳ ಇ-ದಾಖಲಾತಿ ಕಾರ್ಡ್ಗಳು ಮತ್ತು ಪರೀಕ್ಷಾ ಕಾರ್ಯನಿರ್ವಾಹಕರ ಗುರುತಿನ ಕಾರ್ಡ್ಗಳನ್ನು ಸಂಚಾರದ ವೇಳೆ ಪಾಸ್ ಗಳಾಗಿ ಬಳಸಬಹುದು.
ಪರೀಕ್ಷೆ ನಡೆಯುವ ದಿನಾಂಕದವರೆಗೆ ಅಂದರೆ ಜ.6 ರಿಂದ 9 ಮತ್ತು ಜ. 14 ರಿಂದ 16 ವರೆಗೆ ಪರೀಕ್ಷೆಯ ಒಂದು ದಿನದ ಮೊದಲು ಅಭ್ಯರ್ಥಿಗಳು/ ಪರೀಕ್ಷಾ ಕಾರ್ಯನಿರ್ವಾಹಕರು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸಾರಿಗೆಯನ್ನು ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿಸಲಾಗಿದೆ.
ಕೋವಿಡ್ ಸೋಂಕು ಹರಡುತ್ತಿರುವ ಸಂದರ್ಭಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ಆಯೋಗದ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ. ಈ ಮಾರ್ಗಸೂಚಿಗಳು ಪ್ರಮುಖ ಅಭ್ಯರ್ಥಿಗಳು/ ಪರೀಕ್ಷಾ ಕಾರ್ಯನಿರ್ವಾಹಕರ ವೈಯಕ್ತಿಕ ನೈರ್ಮಲ್ಯ, ವೈಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಅಭ್ಯರ್ಥಿಗಳು ಮತ್ತು ಪರೀಕ್ಷಾ ಕಾರ್ಯನಿರ್ವಾಹಕರು ಮಾಸ್ಕ್ ಧರಿಸಬೇಕಿದೆ.
ಪರೀಕ್ಷಾ ಸ್ಥಳಗಳಲ್ಲಿ ಸ್ಯಾನಿಟೈಸರ್ ಮತ್ತು ಸ್ಯಾನಿಟೈಸೇಶನ್ ಮಾಡಲು ಪರೀಕ್ಷಾ ಪದಾಧಿಕಾರಿಗಳು, ಅಭ್ಯರ್ಥಿಗಳು ತಮ್ಮ ಸ್ವಂತ ಸ್ಯಾನಿಟೈಸರ್ ಗಳನ್ನು ಪಾರದರ್ಶಕ ಬಾಟಲಿಗಳಲ್ಲಿ ಕೊಂಡೊಯ್ಯಲು ಅವಕಾಶವಿದೆ. ಕೆಮ್ಮು, ಸೀನು, ಜ್ವರದಿಂದ ಬಳಲುತ್ತಿರುವ ಅಭ್ಯರ್ಥಿಗಳಿಗೆ ಇರುವ ಎರಡು ಹೆಚ್ಚುವರಿ ಪರೀಕ್ಷಾ ಕೊಠಡಿಗಳಲ್ಲಿ ಸೂಕ್ತ ಸುರಕ್ಷತಾ ನಿಯಮಗಳ ಅಡಿಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ.