ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಗಳಿಸಿದ ಹಿಮಾಚಲ ಪ್ರದೇಶದ ಬಿಲಾಸ್ಪುರದ ಗ್ಯಾಮಿನಿ ಸಿಂಗ್ಲಾ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ವ್ಯಕ್ತಿಯಾಗಿದ್ದಾರೆ.
ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಸಿಂಗ್ಲಾರ ಕುಟುಂಬ ಸದಸ್ಯರು ಡೋಲು ನಿನಾದದೊಂದಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಸಡಗರ ಸಂಭ್ರಮದ ವಿಡಿಯೋವನ್ನು ವೀಕ್ಷಣೆ ಮಾಡಿದ ನೆಟ್ಟಿಗರು, ಸಿಂಗ್ಲಾ ಮತ್ತು ಅವರ ಕುಟುಂಬಕ್ಕೆ ಅಭಿನಂದನೆಗಳನ್ನು ಹೇಳಿದ್ದಾರೆ. ಆಕೆಯ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಅವರು ಕೊಂಡಾಡಿದ್ದಾರೆ.
BIG NEWS: ಡಿ.ಕೆ.ಶಿವಕುಮಾರ್ ಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ಮೂರನೇ ರ್ಯಾಂಕ್ ಬಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಂಗ್ಲಾ, ಫಲಿತಾಂಶ ನನಗೆ ಸಂತಸ ತಂದಿದೆ. ನನಗೆ ದೇವರು ಕೃಪೆ ತೋರಿದ್ದಾರೆ. ಈ ಫಲಿತಾಂಶ ಬರಲು ಪ್ರಮುಖ ಕಾರಣ ನನ್ನ ತಾಯಿ ನೈನಾ ದೇವಿಯವರ ಆಶೀರ್ವಾದ ಎಂದು ಹೇಳಿಕೊಂಡಿದ್ದಾಳೆ.
ಸಿಂಗ್ಲಾ ಅವರ ತಂದೆ ತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದು, ಅವರ ಮಾರ್ಗದರ್ಶನದಿಂದ ಸಿಂಗ್ಲಾ ಉತ್ತಮ ರ್ಯಾಂಕ್ ಬರಲು ಸಾಧ್ಯವಾಗಿದೆ.