
ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಈ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 12, 2021ರ ಒಳಗೆ upsc.gov.in ಪೋರ್ಟಲ್‌ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
BIG NEWS: ಇಂದಿನಿಂದ 6 ರಿಂದ 10 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಸಂಜೆವರೆಗೆ ಭೌತಿಕ ತರಗತಿ
ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ಕೇಡರ್‌ಗಳಡಿ ಒಟ್ಟಾರೆ 247 ಹುದ್ದೆಗಳು ಖಾಲಿ ಇವೆ.
ಇಎಸ್‌ಇ ಪರೀಕ್ಷೆಗಳ ಪ್ರಾಥಮಿಕ ಹಂತದ ಪರೀಕ್ಷೆ ಫೆಬ್ರವರಿ 20, 2022ರಂದು ಇರಲಿದೆ. ಆನ್ಲೈನ್ ಮೂಲಕ ನೋಂದಣಿಯಾಗಲು ಅಕ್ಟೋಬರ್ 20, 2021 ಕೊನೆಯ ದಿನಾಂಕವಾಗಿದೆ.
ಜೂನಿಯರ್ ಶೂಟಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ
ಶೈಕ್ಷಣಿಕ ಅರ್ಹತೆ:
– ಯುಜಿಸಿ ಆಯೋಗ ಕಾಯಿದೆ, 1956ರ ಅನ್ವಯ ಭಾರತದ ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿವಿಯಿಂದ ಬಿಇ/ಬಿ.ಟೆಕ್ ಪದವಿ ಹೊಂದಿರಬೇಕು.
– ಇಂಜಿನಿಯರ್‌ಗಳ ಸಂಸ್ಥೆಯ (ಭಾರತ) ಎ ಮತ್ತು ಬಿ ಸೆಕ್ಷನ್‌ಗಳನ್ನು ಕ್ಲಿಯರ್ ಮಾಡಿರಬೇಕು.
– ಸರ್ಕಾರದಿಂದ ಸಮ್ಮತಿ ಪಡೆಯಲ್ಪಡುವ ವಿದೇಶೀ ವಿವಿ/ಕಾಲೇಜು/ಸಂಸ್ಥೆಯಿಂದ ಇಂಜಿನಿಯರಿಂಗ್‌ನಲ್ಲಿ ಡಿಗ್ರಿ/ಡಿಪ್ಲೊಮಾದಲ್ಲಿ ಪದವಿ ಪಡೆಯಬೇಕು.
– ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಸಂಸ್ಥೆಯ (ಭಾರತ) ಪದವೀಧರ ಸದಸ್ಯತ್ವ ಪರೀಕ್ಷೆ ಅರ್ಹತೆ ಪಡೆದಿರಬೇಕು.
– ಭಾರತೀಯ ವೈಮಾನಿಕ ಸಂಘದ ಸಹಾಯಕ ಸದಸ್ಯತ್ವ ಪರೀಕ್ಷೆಯ ಸೆಕ್ಷನ್ ಎ ಮತ್ತು ಬಿ/ಭಾಗ 3 ಮತ್ತು 4ಯಲ್ಲಿ ಅರ್ಹತೆ ಪಡೆದಿರಬೇಕು.
– ಲಂಡನ್‌ನ ಎಲೆಕ್ಟ್ರಾನಿಕ್ಸ್ ಮತ್ತು ರೇಡಿಯೋ ಸಂಸ್ಥೆಯು ನವೆಂಬರ್ 1959ರ ಬಳಿಕ ಹಮ್ಮಿಕೊಂಡ ಪದವೀಧರ ಸದಸ್ಯತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಈಗ ಕಾಫಿಯಲ್ಲೂ ಪಡೆಯಬಹುದು ಸ್ನಾತಕೋತ್ತರ ಪದವಿ..!
ವಯೋಮಿತಿ:- 21- 30 ವರ್ಷ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಮೂರು ಸುತ್ತಿನ ಪರೀಕ್ಷೆ ಇರಲಿದೆ.
– 500 ಅಂಕಗಳಿಗೆ ಪ್ರಾಥಮಿಕ ಪರೀಕ್ಷೆ
– 600 ಅಂಕಗಳಿಗೆ ಮುಖ್ಯ ಪರೀಕ್ಷೆ
– 200 ಅಂಕಗಳಿಗೆ ಸಂದರ್ಶನ
ಅಂತಿಮವಾಗಿ ಅರ್ಹವಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುವುದು.