
ನವದೆಹಲಿ: ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಲೋಕಸೇವಾ ಆಯೋಗದಿಂದ ಫಲಿತಾಂಶ ಪ್ರಕಟಿಸಲಾಗಿದ್ದು, ಶುಭಂ ಕುಮಾರ್ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ.
ಜಾಗೃತಿ ಅವಸ್ಥಿಗೆ ದ್ವಿತೀಯ ರ್ಯಾಂಕ್ ಹಾಗೂ ಅಂಕಿತ್ ಜೈನ್ ಮೂರನೇ ರ್ಯಾಂಕ್ ಪಡೆದುಕೊಂಡಿದ್ದು ಕರ್ನಾಟಕದ ಅಕ್ಷಯ ಸಿಂಹ 77ನೇ ರ್ಯಾಂಕ್ ಪಡೆದಿದ್ದಾರೆ.
2020 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆ ಪಲಿತಾಂಶ ಪ್ರಕಟಿಸಲಾಗಿದ್ದು, ರಾಜ್ಯದ 18 ಅಭ್ಯರ್ಥಿಗಳು ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಕ್ಷಯ ಸಿಂಹ 77ನೇ ರ್ಯಾಂಕ್, ನಿಶ್ಚಯ ಪ್ರಸಾದ್ 130 ನೇ, ಸಿರಿವೆನ್ನೆಲ 204ನೇ, ಅನಿರುದ್ಧ ಆರ್. ಗಂಗಾವರ 252 ನೇ, ಸೂರಜ್ 255, ನೇತ್ರಾ ಮೇಟಿ 326 ನೇ ರ್ಯಾಂಕ್ ಪಡೆದಿದ್ದಾರೆ.