ನವದೆಹಲಿ: ನ್ಯಾಷನಲ್ ಪೆನ್ಷನ್ ಸ್ಕೀಮ್(NPS) ರದ್ದು ಮಾಡಿ ಹಳೆ ಪಿಂಚಣಿ ಯೋಜನೆ(OPS)ಯನ್ನು ಜಾರಿಗೊಳಿಸಬೇಕೆಂದು ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ(UPS) ಪರಿಚಯಿಸಿದೆ.
ಈ ಯುಪಿಎಸ್ ಯೋಜನೆಗೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆರ್.ಎಸ್.ಎಸ್. ಬೆಂಬಲಿತ ಭಾರತೀಯ ಮಜ್ದೂರ್ ಸಂಘ ಕೂಡ ಆಕ್ಷೇಪಿಸಿದ್ದು, ಯುಪಿಎಸ್ ನಲ್ಲಿ ಕೆಲವೊಂದು ಕೊರತೆಗಳು ಹಾಗೆಯೇ ಉಳಿದುಕೊಂಡಿವೆ ಎಂದು ದೂರಿದೆ.
ಯುಪಿಎಸ್ ನಲ್ಲಿ 10ರಷ್ಟು ಸಂಬಳವನ್ನು ಎನ್‌ಪಿಎಸ್ ರೀತಿಯಲ್ಲಿ ಕಡಿತ ಮಾಡಲಾಗುತ್ತದೆ. ಹೀಗಾಗಿ ನಯಾ ಪೈಸೆ ಕಡಿತ ಇಲ್ಲದ ಹಳೆ ಪಿಂಚಣಿ ಯೋಜನೆಯೇ ಉತ್ತಮವಾಗಿದೆ. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಹೇಳಲಾಗಿದೆ.