ನವದೆಹಲಿ: ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಉತ್ತರ ಪ್ರದೇಶದ “ಮಹಾಕುಂಭ 2025” ಟ್ಯಾಬ್ಲೋ ಅತ್ಯುತ್ತಮ ಎಂದು ಆಯ್ಕೆಯಾಗಿದ್ದು, ಜೆ & ಕೆ ರೈಫಲ್ಸ್ ಅತ್ಯುತ್ತಮ ಮಾರ್ಚಿಂಗ್ ಪ್ರಶಸ್ತಿಯನ್ನು ಗೆದ್ದಿದೆ.
‘ಮಹಾಕುಂಭ 2025 – ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ ಎಂಬ ಥೀಮ್ ಅನ್ನು ಆಧರಿಸಿದ ಉತ್ತರ ಪ್ರದೇಶದ ಟ್ಯಾಬ್ಲೋ ಜನವರಿ 26 ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಅತ್ಯುತ್ತಮ ಟ್ಯಾಬ್ಲೋ ಪ್ರಶಸ್ತಿಯನ್ನು ಗೆದ್ದಿದೆ.
ತ್ರಿಪುರಾದ ‘ಶಾಶ್ವತ ಗೌರವ: ತ್ರಿಪುರದಲ್ಲಿ 14 ದೇವತೆಗಳ ಆರಾಧನೆ – ಖಾರ್ಚಿ ಪೂಜೆ’ ಥೀಮ್ ಅನ್ನು ಆಧರಿಸಿದ ಟ್ಯಾಬ್ಲೋ 2 ನೇ ಸ್ಥಾನ ಪಡೆದಿದೆ.
‘ಎಟಿಕೊಪ್ಪಕ ಬೊಮ್ಮಲು – ಪರಿಸರ ಸ್ನೇಹಿ ಮರದ ಆಟಿಕೆಗಳು’ ಅನ್ನು ಚಿತ್ರಿಸುವ ಆಂಧ್ರಪ್ರದೇಶದ ಟ್ಯಾಬ್ಲೋ 3 ನೇ ಬಹುಮಾನವನ್ನು ಪಡೆದುಕೊಂಡಿದೆ.
ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ‘ಜಂಜಾಟಿಯ ಗೌರವ್ ವರ್ಷ’ ಅತ್ಯುತ್ತಮ ಟ್ಯಾಬ್ಲೋ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ತುಕಡಿಯು ಸೇವೆಗಳಲ್ಲಿ ಅತ್ಯುತ್ತಮ ಮಾರ್ಚಿಂಗ್ ತುಕಡಿಯನ್ನು ಗೆದ್ದರೆ, ದೆಹಲಿ ಪೊಲೀಸ್ ಮಾರ್ಚಿಂಗ್ ತುಕಡಿಯು CAPF ಗಳು ಮತ್ತು ಇತರ ಸಹಾಯಕ ಪಡೆಗಳಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ‘ಜಯತಿ ಜೈ ಮಮಹ ಭಾರತಂ’ ನೃತ್ಯ ಗುಂಪಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು:
ನಾಗರಿಕರು ತಮ್ಮ ನೆಚ್ಚಿನ ಟ್ಯಾಬ್ಲೋ ಮತ್ತು ಮಾರ್ಚಿಂಗ್ ತುಕಡಿಗಳಿಗೆ ಮತ ಚಲಾಯಿಸಲು MyGov ಪೋರ್ಟಲ್ನಲ್ಲಿ ಆನ್ಲೈನ್ ಸಮೀಕ್ಷೆಯನ್ನು ನಡೆಸಿದ ನಂತರ, ಗುಜರಾತ್ ತನ್ನ ‘ಸ್ವರ್ಣೀಮ್ ಭಾರತ್: ವಿರಾಸತ್ ಔರ್ ವಿಕಾಸ್’ ಟ್ಯಾಬ್ಲೋಗಾಗಿ ಜನಪ್ರಿಯ ಆಯ್ಕೆ ವಿಭಾಗದಲ್ಲಿ ಅತ್ಯುತ್ತಮ ಟ್ಯಾಬ್ಲೋ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಉತ್ತರ ಪ್ರದೇಶವು ರನ್ನರ್ ಅಪ್ ಆಗಿದ್ದರೆ, ಉತ್ತರಾಖಂಡದ ‘ಸಾಂಸ್ಕೃತಿಕ ಪರಂಪರೆ ಮತ್ತು ಸಾಹಸ ಕ್ರೀಡೆ’ ಟ್ಯಾಬ್ಲೋ 3 ನೇ ಸ್ಥಾನವನ್ನು ಪಡೆದುಕೊಂಡಿತು.
ಈ ಬಾರಿ ಕರ್ನಾಟಕವು ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿತ್ತು.