
ಅಂಕೆ ಇಲ್ಲದೇ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ, ರಾಜ್ಯದ ಒಟ್ಟಾರೆ ಫಲವತ್ತತೆಯ ದರವನ್ನು (ಟಿಎಫ್‌ಆರ್) 2026ರ ವೇಳೆಗೆ ಪ್ರಸಕ್ತ 2.7ರಿಂದ 2.1ಕ್ಕೆ ಇಳಿಸಲು ನಿರ್ಧರಿಸಿದೆ.
ಸಿಎನ್‌ಎನ್-ನ್ಯೂಸ್ 18 ವಿಶ್ಲೇಷಿಸಿದ ದತ್ತಾಂಶದ ಪ್ರಕಾರ ಕಳೆದ ಕೆಲವು ವರ್ಷಗಳಿಂದ ರಾಜ್ಯದ ಟಿಎಫ್‌ಆರ್ ಇಳಿಯುತ್ತಾ ಸಾಗಿದೆ. ಪ್ರತಿ ಮಹಿಳೆಗೆ ಜನಿಸುವ ಸರಾಸರಿ ಮಕ್ಕಳ ಪ್ರಮಾಣವನ್ನು ಟಿಎಫ್‌ಆರ್ ಎನ್ನಲಾಗುತ್ತದೆ.
ಮಹಿಳೆಯರ ಒಪ್ಪಿಗೆಯಿಲ್ಲದೆ ಫೋಟೋ ಪೋಸ್ಟ್: ಎಫ್ಐಆರ್ ದಾಖಲು
1999ರಲ್ಲಿ 4.06 ರಷ್ಟಿದ್ದು ಟಿಎಫ್‌ಆರ್, 2016ರ ವೇಳೆಗೆ 2.7ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಭಾರತಾದ್ಯಂತ ಟಿಎಫ್‌ಆರ್‌ನಲ್ಲಿ 0.7ರಷ್ಟು ಕುಸಿತ ಕಂಡಿದೆ.
2030ರ ವೇಳೆಗೆ ಟಿಎಫ್‌ಆರ್ ದರವನ್ನು 1.9ಕ್ಕೆ ಇಳಿಸುವ ಗುರಿಯನ್ನು ಉ.ಪ್ರ. ಸರ್ಕಾರ ಹೊಂದಿದೆ.