alex Certify UPI Scam Alert: ಆನ್‌ಲೈನ್ ಪಾವತಿ ಮಾಡುವಾಗ ಈ ಸಿಲ್ಲಿ ತಪ್ಪು ಮಾಡದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UPI Scam Alert: ಆನ್‌ಲೈನ್ ಪಾವತಿ ಮಾಡುವಾಗ ಈ ಸಿಲ್ಲಿ ತಪ್ಪು ಮಾಡದಿರಿ

ಕೆಲವೇ ಕ್ಲಿಕ್ ಮೂಲಕ ಪಾವತಿ ಪ್ರಕ್ರಿಯೆಯನ್ನು ಯುಪಿಐ ಸುಲಭವಾಗಿಸಿದೆ. ಜನಪ್ರಿಯ ಕೂಡ ಆಗಿದೆ. ಇದೇ ವೇಳೆ ಒಂದಷ್ಟು ವಂಚನೆ ಮತ್ತು ಹಗರಣದ ಸಾಧ್ಯತೆಯೂ ಹೆಚ್ಚಾಗುತ್ತಿದೆ.

ಆನ್‌ಲೈನ್ ವ್ಯವಹಾರದ ಬಗ್ಗೆ ಸಂದೇಹವಿದ್ದರೆ ಡಿಜಿಟಲ್ ವಹಿವಾಟು ಮಾಡುವಾಗ ಕೆಲವು ಸುರಕ್ಷತಾ ಕ್ರಮ ಅತ್ಯಗತ್ಯವಾಗಿರುತ್ತದೆ. ಆನ್‌ಲೈನ್ ಪಾವತಿ ವಂಚನೆಗಳನ್ನು ತಪ್ಪಿಸಲು ಈ 5 ಹಂತಗಳನ್ನು ಅನುಸರಿಸುವುದು ಸೂಕ್ತವಾದೀತು.

1. ನಿಮ್ಮಯುಪಿಐ ಮತ್ತು ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಗ್ರಾಹಕ ಸೇವಾ ಕರೆ ಅಥವಾ ಕೆಲವು ಸರ್ಕಾರಿ ಸಂಸ್ಥೆ ಅಥವಾ ಬ್ಯಾಂಕ್ ಅಥವಾ ಕೆಲವು ಪ್ರಸಿದ್ಧ ಕಂಪನಿಯನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುತ್ತಾ ಈ ಪಿನ್ ಎಂದಿಗೂ ಹಂಚಿಕೊಳ್ಳಬೇಡಿ. ನೈಜ ಕರೆಯಲ್ಲಿ ಪಿನ್ ಅನ್ನು ಎಂದಿಗೂ ಕೇಳುವುದಿಲ್ಲ. ಹಣವನ್ನು ಸ್ವೀಕರಿಸಲು ಬ್ಯಾಂಕ್ ಸಹ ನಿಮ್ಮ ಪಿನ್ ಅನ್ನು ಎಂದಿಗೂ ಕೇಳುವುದಿಲ್ಲ.

2. ರ್ಯಾಂಡಮ್ ಪೇಮೆಂಟ್ ರಿಕ್ವೆಸ್ಟ್ ತಪ್ಪಿಸುವುದು ಸೂಕ್ತ. ಬಹುತೇಕ ಯುಪಿಐ ಅಪ್ಲಿಕೇಶನ್‌ಗಳು ಸ್ಪಾಮ್ ಫಿಲ್ಟರ್ ಹೊಂದಿದ್ದು, ಎಚ್ಚರಿಕೆ ನೀಡುತ್ತವೆ. ಹಾಗೆಯೇ ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯು ವಂಚಕನಲ್ಲ ಎಂದು ನೀವು 100 ಪ್ರತಿಶತ ಖಚಿತವಾಗಿದ್ದರೆ ಮಾತ್ರ ವ್ಯವಹಾರದೊಂದಿಗೆ ಮುಂದುವರಿಯಿರಿ. ನೀವು ‘ಪೇ’ ಅಥವಾ ‘ಡಿಕ್ಲೈನ್’ ಆಯ್ಕೆಯನ್ನು ಪಡೆಯುತ್ತೀರಿ. ಸಣ್ಣದೊಂದು ಸಂದೇಹವಿದ್ದಲ್ಲಿ, ನೀವು ‘ನಿರಾಕರಣೆ’ ಮಾಡಬೇಕು.

3. ವೆರಿಫೈಯ್ಡ್ ಅಪ್ಲಿಕೇಶನ್ ಮಾತ್ರ ಬಳಸುವುದು ಸೂಕ್ತ. ಮೊಬೈಲ್ ಅಪ್ಲಿಕೇಶನ್‌ಗಳು ನಾವು ಶಾಪಿಂಗ್ ಮಾಡುವ ಮತ್ತು ವಹಿವಾಟು ನಡೆಸುವ ವಿಧಾನವನ್ನು ಬದಲಾಯಿಸಿವೆ. ನಮ್ಮ ಡಿವೈಸ್‌ನಲ್ಲಿ ಪ್ರತಿ ಬಾರಿ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿದಾಗ ವೆರಿಫೈಯ್ಡ್ ಆಗಿದೆಯೇ ಎಂದು ಪರಿಶೀಲಿಸುವುದು ಸೂಕ್ತವಾಗುತ್ತದೆ. ಇದು ಹಣಕಾಸಿನ ಅಪ್ಲಿಕೇಶನ್ ಅಥವಾ ಹೊಸ ಆಟವಾಗಿರಲಿ, ಗೂಗಲ್ ಪ್ಲೇ ಸ್ಟೋರ್, ವಿಡೋಸ್ ಆಪ್ ಸ್ಟೋರ್, ಆಪಲ್ ಆಪ್ ಸ್ಟೋರ್ ನಂತಹ ಅಧಿಕೃತ ಪ್ಲೇ ಸ್ಟೋರ್‌ಗಳಿಂದ ಮಾತ್ರ ಡೌನ್‌ಲೋಡ್ ಮಾಡಿ.

4. ನಿಮ್ಮ ಯುಪಿಐ ಪಿನ್ ಅನ್ನು ಬದಲಾಯಿಸುತ್ತಲೇ ಇರಿ. ಖಾತೆಯನ್ನು ಸುರಕ್ಷಿತವಾಗಿರಿಸಲು ಪಿನ್‌ನ ತ್ರೈಮಾಸಿಕ ಬದಲಾವಣೆಯು ಉತ್ತಮ ಅಭ್ಯಾಸವಾಗಿದೆ.

5. ಎಸ್ಎಂಎಸ್‌ ಅಥವಾ ಇಮೇಲ್‌ಗಳಲ್ಲಿನ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡುವುದು ಒಳ್ಳೆಯದಲ್ಲ. ನಕಲಿ ಇಮೇಲ್‌ಗಳು ಮತ್ತು ಎಸ್ಎಂಎಸ್ ಗಳು ಜನರನ್ನು ವಂಚನೆಗೆ ಸಿಲುಕಿಸುವ ಸಾಮಾನ್ಯ ದಾರಿಯಾಗಿವೆ. ಅವು ನಿಮ್ಮನ್ನು ಫಿಶಿಂಗ್ ಸೈಟ್‌ಗೆ ಕರೆದೊಯ್ಯಬಹುದು ಮತ್ತು ನಿಮ್ಮ ಮೊಬೈಲ್‌ನ ಭದ್ರತಾ ಪಿಚರ್‌ಗಳನ್ನು ಕಸಿದುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...