ಭಾರತದಲ್ಲಿ ಮಾಲ್‌ಗಳಿಂದ ಹಿಡಿದು ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳು ಕೂಡ ಡಿಜಿಟಲ್ ಪಾವತಿಗಳನ್ನು ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್ ಮೂಲಕ ಕೆಲವೇ ಟ್ಯಾಪ್‌ಗಳ ಮೂಲಕ ಹಣ ಪಾವತಿ ಮಾಡಬಹುದಾದ UPI-ಆಧಾರಿತ ಅತ್ಯಂತ ಸರಳ ವಹಿವಾಟನ್ನು ಬಹುತೇಕರು ನೆಚ್ಚಿಕೊಂಡಿದ್ದಾರೆ. ಅಂದಾಜು ಸರಿಸುಮಾರು ಶೇ.40ರಷ್ಟು ಮಂದಿ ಈಗಾಗ್ಲೇ ಯುಪಿಐ ಅನ್ನು ಬಳಕೆ ಮಾಡುತ್ತಿದ್ದಾರೆ.
2022ರಲ್ಲಿ 4,500 ಕೋಟಿಗೂ ಹೆಚ್ಚು ಇ-ಪಾವತಿಗಳಾಗಿರುವುದೇ ಇದಕ್ಕೆ ಸಾಕ್ಷಿ. ಆದರೆ ಇನ್ಮುಂದೆ UPI ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂಬ ವಿಚಾರ ನಾಗರಿಕರಲ್ಲಿ ಆತಂಕವನ್ನು ಉಂಟುಮಾಡಿದೆ. ಆದರೆ ಸಾರ್ವಜನಿಕರು ನಿರಾಳರಾಗಬಹುದು, UPI ಸಂಪೂರ್ಣ ಉಚಿತವಾಗಿದೆ, ಸಧ್ಯಕ್ಕೆ ಯಾವುದೇ ಶುಲ್ಕ ವಿಧಿಸುವ ಸಾಧ್ಯತೆಗಳಿಲ್ಲ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಯುಪಿಐ ಸಾಮಾನ್ಯ ಗ್ರಾಹಕರಿಗೆ ಉಚಿತವಾಗಿದೆ ಎಂದು ಸ್ಪಷ್ಟಪಡಿಸಿದೆ.
1.1 ಪ್ರತಿಶತ ಇಂಟರ್‌ಚೇಂಜ್ ಶುಲ್ಕವು ಪ್ರಿಪೇಯ್ಡ್ ಪಾವತಿ ಸಲಕರಣೆ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. PPI ವ್ಯಾಲೆಟ್‌ಗಳನ್ನು ಇತ್ತೀಚೆಗೆ UPI ಪರಿಸರ ವ್ಯವಸ್ಥೆಯ ಭಾಗವಾಗಲು ಅನುಮತಿಸಲಾಗಿದೆ. ಇದರರ್ಥ ಖಾತೆ ವರ್ಗಾವಣೆ ಮತ್ತು ಪಾವತಿಗಳು ಬಳಕೆದಾರರಿಗೆ ಮತ್ತು ವ್ಯಾಪಾರಿಗಳಿಗೆ ಉಚಿತವಾಗಿರುತ್ತವೆ.
ಅವರು UPI ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳಲ್ಲಿ ಯಾವುದೇ ಬ್ಯಾಂಕ್ ಖಾತೆ, RuPay ಕ್ರೆಡಿಟ್ ಕಾರ್ಡ್‌ಗಳು ಮತ್ತು PPI ವ್ಯಾಲೆಟ್‌ಗಳನ್ನು ಸಹ ಬಳಸಬಹುದು.
ಯುಪಿಐ ಬಳಕೆಯಲ್ಲಿ ಭಾರತೀಯರು ಮುಂದಿರುವ ಕಾರಣ ಇನ್ನಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ. ಸಾಗರೋತ್ತರ ಪಾವತಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಇಷ್ಟು ದಿನ ಉಚಿತವಾಗಿದ್ದ ಯುಪಿಐ ವಹಿವಾಟಿಗೆ ಭವಿಷ್ಯದಲ್ಲಿ ಶುಲ್ಕ ಪಾವತಿಸಬೇಕಾಗಬಹುದು ಎಂಬ ಆತಂಕ ಜನರಲ್ಲಿದೆ.