ಜನಸಾಮಾನ್ಯರು ಕೂಡ ಈಗ UPI ಮೇಮೆಂಟ್ ಅನ್ನೇ ನೆಚ್ಚಿಕೊಂಡಿದ್ದಾರೆ. ಬಹುತೇಕ ವಹಿವಾಟುಗಳು Google Pay, PhonePe ಮತ್ತು Paytm ನಂತಹ UPI ಪಾವತಿ ಅಪ್ಲಿಕೇಶನ್‌ಗಳ ಮೂಲಕ ನಡೆಯುತ್ತಿವೆ. ಆದ್ರೆ ಶೀಘ್ರದಲ್ಲೇ ಈ ಅಪ್ಲಿಕೇಶನ್‌ಗಳು ಬಳಕೆದಾರರ ವಹಿವಾಟುಗಳ ಮೇಲೆ ಮಿತಿಗಳನ್ನು ವಿಧಿಸುವ ಸಾಧ್ಯತೆ ಇದೆ.
ಯುಪಿಐ ಡಿಜಿಟಲ್ ಅನ್ನು ಮುನ್ನಡೆಸುತ್ತಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ), ಅಪ್ಲಿಕೇಶನ್‌ಗಳ ಮಿತಿಯನ್ನು ಶೇ.30ಕ್ಕೆ ಸೀಮಿತಗೊಳಿಸಲು ತನ್ನ ಪ್ರಸ್ತಾವಿತ ಡಿಸೆಂಬರ್ 31ರ ಗಡುವಿನ ಅನುಷ್ಠಾನದ ಕುರಿತು ರಿಸರ್ವ್ ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಆದ್ರೆ Google Pay ಮತ್ತು PhonePe ಸುಮಾರು 80 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರರಿಗೆ (TPAP) 30 ಪ್ರತಿಶತ ವಾಲ್ಯೂಮ್ ಕ್ಯಾಪ್ ಅನ್ನು NPCI ಈಗಾಗ್ಲೇ ಪ್ರಸ್ತಾಪಿಸಿದೆ.
ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ಸಭೆ ನಡೆಸಲಾಗಿದೆ. ಎನ್‌ಪಿಸಿಐ ಅಧಿಕಾರಿಗಳಲ್ಲದೆ, ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. NPCI ಇನ್ನೂ ಎಲ್ಲಾ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡುತ್ತಿರುವುದರಿಂದ ಡಿಸೆಂಬರ್ 31ರ ಗಡುವನ್ನು ವಿಸ್ತರಿಸಲು ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ತಿಂಗಳ ಅಂತ್ಯದ ವೇಳೆಗೆ, UPI ಮಾರುಕಟ್ಟೆ ಮಿತಿ ಅನುಷ್ಠಾನದ ಸಮಸ್ಯೆಯನ್ನು NPCI ನಿರ್ಧರಿಸುವ ಸಾಧ್ಯತೆಯಿದೆ.
Paytm, ಮೂರನೇ ಶ್ರೇಯಾಂಕದ ಪಾವತಿ ಅಪ್ಲಿಕೇಶನ್ ಟೈಮ್‌ಲೈನ್ ಪ್ರಕಾರ ಮಾರುಕಟ್ಟೆಯ ಮಿತಿಯನ್ನು ಜಾರಿಗೆ ತರಲು ಬಯಸುತ್ತದೆ. ವಾಲ್‌ಮಾರ್ಟ್ ಮಾಲೀಕತ್ವದ ಫೋನ್‌ಪೇ ಮತ್ತು ಗೂಗಲ್ ಪೇ ಸ್ವತಂತ್ರವಾಗಿ ಯುಪಿಐ ನಿಯಂತ್ರಕ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅನ್ನು ಸಂಪರ್ಕಿಸಿದ್ದವು. ಗಡುವಿನ ಅವಧಿಯನ್ನು ಕನಿಷ್ಠ ಮೂರು ವರ್ಷಗಳವರೆಗೆ ವಿಸ್ತರಿಸಲು ಮನವಿ ಮಾಡಿದ್ದವು. ಯುಪಿಐ ಅನುಕೂಲಕರವಾಗಿದೆ ಮತ್ತು ಅದರ ಮೇಲೆ ಯಾವುದೇ ಶುಲ್ಕ ವಿಧಿಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಕೂಡ ಇತ್ತೀಚೆಗೆ ಹೇಳಿತ್ತು.