alex Certify ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಮರು ಬಿಡುಗಡೆಯಾಗಲಿದೆ ‘ಉಪೇಂದ್ರ’ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಮರು ಬಿಡುಗಡೆಯಾಗಲಿದೆ ‘ಉಪೇಂದ್ರ’ ಚಿತ್ರ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿದೇಶಿಸಿದ್ದ ‘ಉಪೇಂದ್ರ’ ಚಿತ್ರ 1999 ಅಕ್ಟೋಬರ್ 22 ರಂದು ತೆರೆ ಕಂಡಿತ್ತು, ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ವಿಭಿನ್ನ ಕಥಾ ಹಂದರ ಹೊಂದಿರುವ ಈ ಸಿನಿಮಾ ಮುಂದಿನ ತಿಂಗಳಿಗೆ ಇಪ್ಪತ್ತೈದು ವರ್ಷ  ಪೂರೈಸಲಿದ್ದು, ಚಿತ್ರತಂಡ ಮುಂಚಿತವಾಗಿಯೇ ಸಂಭ್ರಮಿಸಲು ಸಜ್ಜಾಗಿದೆ. ಸೆಪ್ಟೆಂಬರ್ 18ರಂದು ರಿಯಲ್ ಸ್ಟಾರ್ ಉಪೇಂದ್ರ 56ನೇ ವಸಂತಕ್ಕೆ ಕಾಲಿಡಲಿದ್ದು, ಅದೇ ದಿನದಂದು ಉಪೇಂದ್ರ   ರೀ ರಿಲೀಸ್ ಆಗಲಿದೆ.

ಈ ಚಿತ್ರವನ್ನು ಶ್ರೀನಿವಾಸ ಪ್ರೊಡಕ್ಷನ್  ಬ್ಯಾನರ್ ನಲ್ಲಿ ಶಿಲ್ಪಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದು, ಉಪೇಂದ್ರ ಜೊತೆ ರವೀನಾ ಟಂಡನ್, ಪ್ರೇಮ, ದಾಮಿನಿ, ನಾಯಕಿಯರಾಗಿ ಅಭಿನಯಿಸಿದ್ದಾರೆ.‌ ಸರೋಜಮ್ಮ, ಗುರುಕಿರಣ್, ಅರುಣ್ ಗೋವಿಲ್, ವಿ.ಮನೋಹರ್, ಆರ್‌ಜಿ ವಿಜಯಸಾರಥಿ, ಶಂಕರ್ ಭಟ್ ಉಳಿದ ಪಾತ್ರ ವಾರ್ಗದಲ್ಲಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದು,  ಟಿ ಶಶಿಕುಮಾರ್ ಸಂಕಲನ, ಹಾಗೂ ಏ ವಿ ಕೃಷ್ಣಕುಮಾರ್ ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...