ಹೊಸದಾಗಿ ನವೀಕರಿಸಿದ 2022 Nmax 155 ಸ್ಕೂಟರ್ ಅನ್ನು ಯಮಹಾ ಕಂಪನಿ ತನ್ನ ಇಂಡೋನೇಷ್ಯಾದ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. 30.7 ಮಿಲಿಯನ್ ರುಪಿಯಾ (Rs 1.59 ಲಕ್ಷ) ಆರಂಭಿಕ ಬೆಲೆಯಲ್ಲಿ ಈ ಮಾಡೆಲ್ ಅನ್ನು ಯಮಹಾ ಪರಿಚಯಿಸಿದೆ.
ಈ ಸ್ಕೂಟರ್ ತನ್ನ ಶಕ್ತಿಯನ್ನು YZF-R15 V4 ಇಂಜಿನ್‌ನಿಂದ ಪಡೆಯುತ್ತದೆ. 2022 Nmax 155 ಎರಡು ಹೊಸ ಬಣ್ಣಗಳಲ್ಲಿ ಲಭ್ಯವಿದೆ — ಮ್ಯಾಟ್ ಗ್ರೀನ್ ಮತ್ತು ಮೆಟಾಲಿಕ್ ರೆಡ್. ಸ್ಕೂಟರ್‌ನಲ್ಲಿ ಯಾವುದೇ ರೀತಿಯ ಯಾಂತ್ರಿಕ ಮಾರ್ಪಾಡುಗಳನ್ನು ಮಾಡಲಾಗಿಲ್ಲ.
SHOCKING NEWS: ಪೈಪ್ ಲೈನ್ ಗುಂಡಿಗೆ ಬಿದ್ದ ಕಂದಮ್ಮ; ಆಸ್ಪತ್ರೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದ ಮಗು
ಇದೇ ಸ್ಕೂಟರ್‌ನ 2021ರ ಮಾದರಿಯಿಂದ ಮೂರು ಬಣ್ಣದ ಆಯ್ಕೆಗಳನ್ನು ಸಹ ಮುಂದುವರೆಸಲಾಗಿದೆ – ಮ್ಯಾಟ್ ಬ್ಲೂ, ಮ್ಯಾಟ್ ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್. ಹೊಸ ಬಣ್ಣಗಳ ಸೇರ್ಪಡೆಯ ಹೊರತಾಗಿ, ಸ್ಕೂಟರ್‌ನ ವಿನ್ಯಾಸ ಬದಲಾಗದೆ ಉಳಿದಿದೆ. ಸ್ಕೂಟರ್‌ನ ಮ್ಯಾಟ್ ಗ್ರೀನ್ ಆವೃತ್ತಿಯು ಈಗ ಗೋಲ್ಡನ್ ಅಲಾಯ್ ಚಕ್ರಗಳೊಂದಿಗೆ ಬರುತ್ತದೆ, ಆದರೆ ಮ್ಯಾಟ್ ರೆಡ್ ಕಪ್ಪು ಮಿಶ್ರಲೋಹದ ಚಕ್ರಗಳನ್ನು ಪಡೆದುಕೊಂಡಿದೆ.
ಹೊಸ ವಿನ್ಯಾಸದ ಪ್ರಕಾರ, ಸ್ಕೂಟರ್‌ನ ಮುಂಭಾಗದ ಭಾಗವು ಸ್ವಲ್ಪ ಹೆಚ್ಚು ಅಗಲವಾಗಿದ್ದು, ಹೊಸ ಎಲ್‌ಇಡಿ ಹೆಡ್‌ಲೈಟ್ ಮತ್ತು ಮಾಸ್ಕ್ ಹೊಂದಿದೆ. ಮುಂಬದಿ ಹಾಗೂ ಹಿಂಬದಿ ಸವಾರರಿಗೆ ಇನ್ನಷ್ಟು ಆರಾಮವಾಗಿ ಕುಳಿತು ಸಾಗಲು ಈ ಹೊಸ ಮಾಡೆಲ್‌ನಲ್ಲಿ ಅನುವು ಮಾಡಿಕೊಡಲಾಗಿದೆ.