ನೆಕ್ಸಾನ್ ಇವಿ ಎಸ್‌ಯುವಿಯ ವಿಸ್ತರಿತ ರೇಂಜ್ ಅಭಿವೃದ್ಧಿಪಡಿಸುತ್ತಿರುವ ಟಾಟಾ ಮೋಟರ್ಸ್, ಕಾರಿನ ಬ್ಯಾಟರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ದೇಶದ ಬೆಸ್ಟ್ ಸೆಲ್ಲಿಂಗ್ ಇವಿಯಾಗಿರುವ ನೆಕ್ಸಾನ್‌ಗೆ ಇನ್ನಷ್ಟು ಸುಧಾರಿತ ಬ್ಯಾಟರಿ ಅಳವಡಿಸುವ ಮೂಲಕ ಅದರ ಚಾಲನಾ ವ್ಯಾಪ್ತಿಯಲ್ಲಿ ವರ್ಧನೆಯಾಗಲಿದೆ. ಟಾಟಾ ನೆಕ್ಸಾನ್ ಇವಿಯ 2022ರ ಆವೃತ್ತಿಯು ವರ್ಷದ ಆರಂಭಿಕ ಮಾಸಗಳಲ್ಲಿ ಮಾರುಕಟ್ಟೆಗೆ ಬರಲಿದೆ.
ಪರಿಷತ್ ಚುನಾವಣೆ: ಸಂಜೆ ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಇದೇ ವೇಳೆ, ಜಿಪ್ಟ್ರಾನ್ ತಂತ್ರಜ್ಞಾನದ ಆಧರಿತ ಟೈಗೋರ್ ಇವಿಯನ್ನು ಟೈಗೋರ್ ಅಪ್ಡೇಟ್ ಮಾಡಿದೆ. ಭಾರತದಲ್ಲಿ ಮಾರಾಟ ಆಗುತ್ತಿರುವ ಶೂನ್ಯ ಮಾಲಿನ್ಯದ ವಾಹನಗಳ 60%ನಷ್ಟು ಮಾರುಕಟ್ಟೆ ಪಾಲನ್ನು ಟಾಟಾ ಒಂದೇ ಹೊಂದಿದೆ.
14.24 ಲಕ್ಷ – 16.85 ಲಕ್ಷ ರೂ.ಗಳ ಬೆಲೆಯ ರೇಂಜ್‌ನಲ್ಲಿ ಬರುವ ನೆಕ್ಸಾನ್ ಇವಿ, ತನ್ನ ಎದುರಾಳಿಗಳಾದ ಎಂಜಿ ಜ಼ಡ್‌ಎಸ್ ಇವಿ ಮತ್ತು ಹ್ಯೂಂಡಾಯ್ ಕೊನಾಗಳಿಗಿಂಲೂ ಕಡಿಮೆ ರೇಂಜ್ ಹೊಂದಿದ್ದರೂ ಸಹ ತನ್ನ ಬೆಲೆಯಿಂದಾಗಿ ಮಾರುಕಟ್ಟೆಯಲ್ಲಿ ಯಶಸ್ವೀ ಓಟ ಕಾಣುತ್ತಿದೆ.
30.2 ಕಿವ್ಯಾ ಬ್ಯಾಟರಿ ಪ್ಯಾಕ್ ಜೊತೆಗೆ ಬರುವ ಕೊನಾ ಪೂರ್ಣವಾಗಿ ಚಾರ್ಜ್ ಆದ ಬ್ಯಾಟರಿ ಮೇಲೆ 312 ಕಿಮೀ ಕ್ರಮಿಸಬಲ್ಲದಾಗಿದ್ದು, 127 ಎಚ್‌ಪಿ ಮತ್ತು 245 ಎನ್‌ಎಂ ಶಕ್ತಿ ಉತ್ಪಾದಿಸುವ ಮೋಟರ್ ಹೊಂದಿದೆ.
ನೆಕ್ಸಾನ್ ಇವಿಯ ರೇಂಜ್ 200 ಕಿಮೀಗಳಷ್ಟಿದ್ದು, ನಗರಗಳಲ್ಲಿನ ಓಡಾಟಕ್ಕೆ ಸಾರ್ವಜನಿಕರು ಹೆಚ್ಚಾಗಿ ಇದನ್ನು ಅವಲಂಬಿಸಿದ್ದಾರೆ. ಆದರೆ 2022ರಲ್ಲಿ ನೆಕ್ಸಾನ್ ಬ್ಯಾಟರಿಯಲ್ಲಿ ಮಾರ್ಪಾಡು ಮಾಡಲಾಗುವುದು. 40ಕಿವ್ಯಾ ಬ್ಯಾಟರಿ ಪ್ಯಾಕ್ ಮೂಲಕ 100ಕೆಜಿಯಷ್ಟು ತೂಕ ಹೆಚ್ಚಾಗುವುದನ್ನು ಸರಿದೂಗಿಸಲು ಇನ್ನಷ್ಟು ಮಾರ್ಪಾಡುಗಳನ್ನು ಅಭಿವೃದ್ಧಿ ಹಂತದಲ್ಲಿ ಈ ಕಾರಿಗೆ ಮಾಡಲಾಗುತ್ತಿದೆ.
33% ಅಧಿಕ ಬ್ಯಾಟರಿ ಸಾಮರ್ಥ್ಯದಿಂದಾಗಿ ನೆಕ್ಸಾನ್‌ನ ಚಾಲನಾ ವ್ಯಾಪ್ತಿ 400 ಕಿಮೀಗಳಿಗೆ ಏರಿಕೆಯಾಗಲಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿಗಳೊಂದಿಗಿನ ಪೈಪೋಟಿಯಲ್ಲಿ ನೆಕ್ಸಾನ್‌ಗೆ ಇನ್ನಷ್ಟು ಬಲ ಬಂದಂತಾಗಲಿದೆ.