ಕಳೆದ 20 ವರ್ಷಗಳಿಂದಲೂ ತನ್ನ ಬೊಲೆರೋ ವಾಹನಕ್ಕೆ ಕಾಲಕಾಲಿಕ ಮೇಲ್ದರ್ಜೆಗಳನ್ನು ಮಾಡಿಕೊಂಡು ಬಂದಿರುವ ಮಹಿಂದ್ರಾ ಈಗ ಈ ವಾಹನಕ್ಕೆ ಮತ್ತೊಂದು ನವೀಕರಣ ಮಾಡುತ್ತಿದೆ.
ಬೊಲೆರೋದ ಹೊಸ ಅವತಾರ ಬಿಡುಗಡೆ ಮಾಡಲಿರುವ ಮಹಿಂದ್ರಾ, ಹೊಸದಾಗಿ ಬಿಎಸ್6 ಮಾಲಿನ್ಯದ ಮಟ್ಟಗಳಿಗೆ ತಕ್ಕನಾದ ಇಂಜಿನ್ ಸೇರಿದಂತೆ ಅನೇಕ ಮಾರ್ಪಾಡುಗಳನ್ನು ತರುತ್ತಿದೆ. ಸದ್ಯ ಬೊಲೆರೋಗೆ ಬಣ್ಣದ ಆಯ್ಕೆಗಳು ಕೇವಲ ಮೂರು ಮಾತ್ರ ಇವೆ – ಬಿಳಿ, ಬೆಳ್ಳಿ ಮತ್ತು ಕಂದು. ಡ್ಯುಯಲ್ ಟೋನ್ ಬಣ್ಣದ ಸ್ಕೀಂಗಳ ಮೂಲಕ ಇನ್ನಷ್ಟು ಹೊಸ ಬಣ್ಣಗಳಲ್ಲಿ ಬೊಲೆರೋ ಬರಲಿದೆ.
2.60 ಲಕ್ಷ ಹುದ್ದೆ ಭರ್ತಿ, ಕೇಂದ್ರ ನೌಕರರ ಸಮಾನ ವೇತನ, OPS ನೀಡಲು ಒತ್ತಾಯಿಸಿ ಸರ್ಕಾರಿ ನೌಕರರ ಪ್ರತಿಭಟನೆ
ಬೊಲೆರೋದ ಒಳಾಂತರದಲ್ಲಿ ಪ್ರಯಾಣಿಕ ಬದಿಯ ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಇದಕ್ಕೂ ಮುನ್ನ ಚಾಲಕನ ಸೀಟಿಗೆ ಮಾತ್ರವೇ ಏರ್‌ಬ್ಯಾಗ್ ಲಭ್ಯವಿತ್ತು. 2022ರಿಂದ ಎಲ್ಲಾ ಹೊಸ ಕಾರುಗಳಿಗೆ ಅವಳಿ ಏರ್‌ಬ್ಯಾಗ್‌ಗಳನ್ನು ಸರ್ಕಾರ ಕಡ್ಡಾಯಗೊಳಿಸಿರುವ ಕಾರಣ, ಬೊಲೆರೋಗೆ ಈ ಸುಧಾರಣೆ ತರಲಾಗಿದೆ.
ಮಿಕ್ಕಂತೆ, ಅದೇ 1.5ಲೀ, ಎಂಹಾಕ್ 3-ಸಿಲಿಂಡರ್ ಡೀಸೆಲ್ ಇಂಜಿನ್ ಮೂಲಕ 75 ಎಚ್‌ಪಿ ಮತ್ತು 210 ಎನ್‌ಎಂ ಟಾರ್ಕ್‌ನಷ್ಟು ಶಕ್ತಿ ಉತ್ಪಾದಿಸಬಲ್ಲ ಬೊಲೆರೋಗೆ 5-ಸ್ಪೀಡ್ ಗಿಯರ್ ಬಾಕ್ಸ್ ಸವಲತ್ತು ಸಹ ಇದೆ.
ಬೊಲೆರೋದ ಪ್ರಸಕ್ತ ಮಾಡೆಲ್‌ನ ಬೆಲೆ 8.71 ಲಕ್ಷ ರೂನಿಂದ 9.70 ಲಕ್ಷ ರೂಗಳಷ್ಟಿದೆ. ಪ್ರಯಾಣಿಕ ಬದಿಯ ಏರ್‌ಬ್ಯಾಗ್‌ನಿಂದಾಗಿ ಈ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.