alex Certify ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಜಾಬ್​ ಪಲ್ಸರ್ 220F ಪರಿಚಯಿಸಿದೆ. ಇದರ ಎಕ್ಸ್​ ಷೋರೂಂ ಬೆಲೆ 1,39,686 ರೂಪಾಯಿಗಳು. ಇದು ಮೂಲ ಬಜಾಜ್ ಪಲ್ಸರ್​ನ ಗುಣಗಳನ್ನೇ ಹೊಂದಿದೆ.

ಯಾಂತ್ರಿಕವಾಗಿ ಯಾವುದೇ ಬದಲಾವಣೆಯಿಲ್ಲ. ಆದರೆ ಎಂಜಿನ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಇದು BSVI ಹಂತ 2 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ.

ಇದರ ಜೊತೆಗೆ ಡ್ಯುಯಲ್ ಎಲ್‌ಇಡಿ ಟೈಲ್ ಲೈಟ್‌ಗಳು, ಸ್ಪ್ಲಿಟ್ ಗ್ರಾಬ್ ರೈಲ್, ಕಪ್ಪು ಮಿಶ್ರಲೋಹದ ಚಕ್ರಗಳು, ಹ್ಯಾಲೊಜೆನ್ ಟರ್ನ್ ಇಂಡಿಕೇಟರ್‌ಗಳು ಮತ್ತು ಪೈಲಟ್ ಲೈಟಿಂಗ್, ಪ್ರೊಜೆಕ್ಟರ್ ಹೆಡ್‌ಲೈಟ್, ಟಾಲ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಇವುಗಳಲ್ಲಿ ಸ್ವಲ್ಪ ಅಪ್​ಡೇಟ್​ ಮಾಡಲಾಗಿದೆ. ಇದರ ಹೊರತಾಗಿಯೂ ಮೂಲ ಬೈಕ್​ನ ಉತ್ತಮ ವೈಶಿಷ್ಟ್ಯಗಳನ್ನೇ ಇವು ಹೊಂದಿವೆ.

ಬಜಾಜ್ ಪಲ್ಸರ್ 220F ಇದರ ಬ್ರೇಕಿಂಗ್ ಸಿಸ್ಟಮ್​ನಲ್ಲಿ ತುಸು ಬದಲಾವಣೆ ಆಗಿದೆ. ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ, ಇವೆರಡೂ ಏಕ-ಚಾನೆಲ್ ಎಬಿಎಸ್ ಸಿಸ್ಟಮ್‌ನಿಂದ ಸಹಾಯದಿಂದ ರೂಪಿಸಲಾಗಿದೆ.

ಮೋಟಾರ್‌ಬೈಕ್ 90/90 ವಿಭಾಗದೊಂದಿಗೆ 17-ಇಂಚಿನ ಮುಂಭಾಗದ ಚಕ್ರ ಮತ್ತು 120/80 ವಿಭಾಗದೊಂದಿಗೆ ಹಿಂದಿನ ಚಕ್ರವನ್ನು ಹೊಂದಿದೆ. ಮೊದಲಿನಂತೆಯೇ 220F ಕೂಡ 1,350 ಮಿಲಿಮೀಟರ್‌ಗಳ ವ್ಹೀಲ್‌ಬೇಸ್, 165 ಮಿಲಿಮೀಟರ್‌ಗಳ ಗ್ರೌಂಡ್ ಕ್ಲಿಯರೆನ್ಸ್ ಮತ್ತು 795 ಮಿಲಿಮೀಟರ್‌ಗಳ ಸೀಟ್ ಎತ್ತರವನ್ನು ಹೊಂದಿರುವುದಾಗಿ ಕಂಪೆನಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...