ತೈವಾನ್ ನ ಪೂರ್ವ ಕರಾವಳಿಯಲ್ಲಿ ಬುಧವಾರ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಸುನಾಮಿ ಎಚ್ಚರಿಕೆಗಳು ಕಡಿಮೆಯಾಗಿದ್ದರೂ, ಘಟನೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ. ಇದರ ನಡುವೆ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ ಮತ್ತು ರೈಲು ಮತ್ತು ವಿಮಾನ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಶಾಂಘೈ ಮತ್ತು ಚೀನಾದ ಆಗ್ನೇಯ ಕರಾವಳಿಯ ಹಲವಾರು ಪ್ರಾಂತ್ಯಗಳು ಮತ್ತು ದಕ್ಷಿಣ ಜಪಾನ್ನಲ್ಲಿಯೂ ಭೂಕಂಪನದ ಅನುಭವವಾಗಿದೆ.
ಮೂಲಗಳ ಪ್ರಕಾರ, ಭೂಕಂಪವು ಕನಿಷ್ಠ ನಾಲ್ಕು ಸಾವುಗಳಿಗೆ ಕಾರಣವಾಗಿದೆ, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತೈವಾನ್ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ.ತೈವಾನ್ ನಲ್ಲಿ ಭೂಕಂಪದ ಕೇಂದ್ರಬಿಂದುವಾದ ಹುವಾಲಿಯನ್ನಲ್ಲಿ ಕನಿಷ್ಠ 26 ಕಟ್ಟಡಗಳು ಕುಸಿದಿವೆ. ಸುಮಾರು 20 ಜನರು ಸಿಕ್ಕಿಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ತೈವಾನ್ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೈನ್ನು ನಡುಗಿಸಿದೆ. ಪೂರ್ವ ತೈವಾನ್ ನಲ್ಲಿ ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಧರಾಶಾಹಿಯಾಗಿವೆ. ಭೂಕಂಪನದಿಂದಾಗಿ ಹಲವೆಡೆ ವಿದ್ಯುತ್ ವ್ಯತ್ಯಯವುಂಟಾಗಿದೆ. ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದೆ.ತೈವಾನ್, ಓಕಿನಾವಾ, ದಕ್ಷಿಣ ಜಪಾನ್ ಹಾಗೂ ಫಿಲಿಫೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.