ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಹಿಮಾಲಯದ ಪ್ರದೇಶಗಳಿಗೆ ಬೈಕಿಂಗ್ ಪ್ರವಾಸಗಳನ್ನು ಹಮ್ಮಿಕೊಳ್ಳುವುದು ವಿಷಯ ಗೊತ್ತಿರುವುದೇ. ಇದೀಗ ದಕ್ಷಿಣ ಧ್ರುವದತ್ತ ರಾಯಲ್ ಎನ್‌ಫೀಲ್ಡ್ ಟೂರಿಂಗ್ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ 39 ದಿನಗಳ ಕಾಲ ಅಂಟಾರ್ಕ್ಟಿಕಾವನ್ನು ಹಾಯ್ದು ದಕ್ಷಿಣ ಧ್ರುವ ತಲುಪುವುದು ಈ ಪ್ಲಾನ್‌ನ ಸ್ಕೆಚ್ ಆಗಿದೆ. ವರ್ಷಗಳಿಂದ ಈ ಪ್ರಯಾಣಕ್ಕೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಇದಕ್ಕಾಗಿ ತನ್ನ ಹಿಮಾಲಯನ್ ಬೈಕ್‌ಗಳಿಗೆ ಒಂದಷ್ಟು ಮಾರ್ಪಾಡುಗಳನ್ನು ಮಾಡಿದೆ.
ಈ ವಿಚಾರವಾಗಿ ವಿಡಿಯೋವೊಂದನ್ನು ಬೈಕ್ ಉತ್ಪಾದಕ ಸಾಮಾಜಿಕ ಜಾಲತಾಣಗಳಲ್ಲಿರುವ ತನ್ನ ಚಾನೆಲ್‌ಗಳಲ್ಲಿ ಶೇರ್ ಮಾಡಿಕೊಂಡಿದೆ.
ಇದೇ ವಿಡಿಯೋವನ್ನು ನೀವು 1:28ಕ್ಕೆ ಸ್ಕ್ರಾಲ್ ಮಾಡಿ ನೋಡಿದರೆ ಅಲ್ಲೊಂದು ಬೈಕ್ ಗಮನ ಸೆಳೆಯುತ್ತದೆ. ಇದು ರಾಯಲ್ ಎನ್‌ಫೀಲ್ಡ್‌ನ 350 ಸಿಸಿ ಸ್ಕ್ರಾಂಬ್ಲರ್ ಬೈಕ್ ಎಂದು ಹೇಳಬಹುದಾಗಿದೆ. ಈ ಬೈಕ್ ಕೆಲ ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದೆ. ಈ ವಿಡಿಯೋದಲ್ಲಿ ಸ್ಕ್ರಾಂಬ್ಲರ್ ಬಗ್ಗೆ ಏನೂ ಹೇಳಿಲ್ಲ. ಆದರೆ, ಸ್ಕ್ರಾಂಬ್ಲರ್ ಉತ್ಪಾದನೆಗೆ ಒಳಪಟ್ಟು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯನ್ನು ಈ ವಿಡಿಯೋ ಸೂಚಿಸುತ್ತಿದೆ.
LPG ಸಿಲಿಂಡರ್ ಬುಕ್ ಮಾಡುವಾಗ ‘ಕ್ಯಾಶ್ ಬ್ಯಾಕ್’ ಪಡೆಯಲು ಹೀಗೆ ಮಾಡಿ
ಮೆಟಿಯಾರ್ 350 ಹಾಗೂ ನ್ಯೂ ಕ್ಲಾಸಿಕ 350 ಬೈಕ್‌ಗಳ ಪ್ಲಾಟ್‌ಫಾರಂನಲ್ಲೇ ಅಭಿವೃದ್ಧಿಪಡಿಸಲಾದ ಸ್ಕ್ರಾಂಬ್ಲರ್ ರಾಯಲ್ ಎನ್‌ಫೀಲ್ಡ್ ಹಂಟರ್ 350. ದುಂಡಾದ ಹೆಡ್‌ಲ್ಯಾಂಪ್, ಉದ್ದುದ್ದ ಇಂಧನ ಟ್ಯಾಂಕ್, ಸಿಂಗಲ್ ಸ್ಯಾಡಲ್, ಅಗಲವಾದ ಹ್ಯಾಂಡಲ್ ಬಾರ್‌ಗಳು ಈ ಬೈಕ್‌ನ ವಿಶೇಷ. ಮುಂಬದಿ ಫೋರ್ಕ್‌ಗಳು, ಕಪ್ಪು ಬಹೊಲೋಹೀಯ ಚಕ್ರಗಳು ಹಾಗೂ ಕಪ್ಪು ಬಣ್ಣದ ಇಂಜಿನ್ ಬೇಯನ್ನು ಈ ಬೈಕ್ ಹೊಂದಿದೆ.
ಮೆಟಿಯಾರ್ 350ಗೆ ಬಲ ನೀಡುವ ಅದೇ ಇಂಜಿನ್ ಅನ್ನು ಹಂಟರ್ ಬಳಸಲಿದೆ. 349ಸಿಸಿ, ಏರ್-ಕೂಲ್ಡ್ ಇಂಜಿನ್ ಹೊಂದಿರುವ ಹಂಟರ್ 20 ಬಿಎಚ್‌ಪಿ ಹಾಗೂ 27 ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದಾಗಿದೆ. ಇದಕ್ಕೆ ಪ್ರತಿಯಾಗಿ 5-ಸ್ಪೀಡ್ ಗೇರ್‌ಬಾಕ್ಸ್‌ಅನ್ನು ಹಂಟರ್ ಹೊಂದಿದೆ.
ಬಿಡುಗಡೆಯಾಗುತ್ತಲೇ ಈ ಬೈಕ್‌ಗೆ ಹೋಂಡಾದ ಸಿಬಿ350 ಆರ್‌ಎಸ್‌ನಿಂದ ಪೈಪೋಟಿ ಸಿಗಲಿದೆ.