ತನ್ನ ನೆಕ್ಸಾ ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್ ಮುಖಾಂತರ ಬಲೆನೋ ಕಾರುಗಳ ಬುಕಿಂಗ್‌ಗೆ ಮಾರುತಿ ಸುಜ಼ುಕಿ ಚಾಲನೆ ನೀಡಿದೆ. ಆರಂಭಿಕ ಮೊತ್ತ ರೂ. 11,000 ಕ್ಕೆ 2022 ಬಲೆನೋಗಳ ಬುಕಿಂಗ್ ಮಾಡಬಹುದಾಗಿದೆ. ವದಂತಿಯೊಂದರ ಪ್ರಕಾರ, ಮಾರುತಿ ಸುಜುಕಿ ಈ ತಿಂಗಳು ಬಲೆನೋದ ಹೊಸ ಅವತಾರವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ, ಬಹುಶಃ ಫೆಬ್ರವರಿ ಕೊನೆಯ ವಾರದಲ್ಲಿ.
ಹೊಸ ಬಲೆನೊದಲ್ಲಿ, ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ರೂಪಾಂತರಗಳಿದ್ದು, ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಲಿದೆ. ಬೇಸ್ ಹೊರತುಪಡಿಸಿ ಮಿಕ್ಕ ಎಲ್ಲಾ ರೂಪಾಂತರಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಪಡೆಯಲಿವೆ. ಹೊರಹೋಗುವ ಮಾದರಿಯಲ್ಲಿ ಇದ್ದ ಸಿವಿಟಿ ಟ್ರಾನ್ಸ್‌ಮಿಶನ್ ಬದಲಿಗೆ ಎಎಂಟಿ ಗೇರ್‌ಬಾಕ್ಸ್ ಬರಲಿದ್ದು, ಸ್ವಯಂಚಾಲಿತ ಮಾದರಿಗಳನ್ನು ಗ್ರಾಹಕರಿಗೆ ಇನ್ನಷ್ಟು ಸ್ನೇಹಿಯಾಗಿರುವಂತೆ ಮಾಡಲಾಗುವುದು.
SBI Kisan Credit Card: ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಪಡೆಯಲು ಇಲ್ಲಿದೆ ಡಿಟೇಲ್ಸ್
ಕ್ಯಾಬಿನ್‌ನ ಒಳಗಡೆ, ಹೆಡ್-ಅಪ್ ಡಿಸ್‌ಪ್ಲೇ (HUD) ಮಾತ್ರವೇ ಹೇಳಿಕೊಳ್ಳುವ ಸುಧಾರಣೆಯಾಗಿದೆ. ಇದು ಚಾಲಕರು ತಮ್ಮ ಕಣ್ಣುಗಳನ್ನು ರಸ್ತೆಯಿಂದ ತೆಗೆಯದೆಯೇ ಸ್ಪೀಡೋಮೀಟರ್, ಹವಾಮಾನ ನಿಯಂತ್ರಣ ಇತ್ಯಾದಿಗಳಂತಹ ಪ್ರಮುಖ ಮಾಹಿತಿಯನ್ನು ಪಡೆಯುವಂತೆ ಪ್ರದರ್ಶಿಸುತ್ತದೆ.
ಬಲೆನೋ ಕಾರು ಆರು ವಿಭಿನ್ನ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ — ಒಪ್ಯುಲೆಂಟ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಲಕ್ಸ್ ಬೀಜ್. ಎಲ್ಲಾ ಬಣ್ಣಗಳು ಮೆಟಾಲಿಕ್ ಶೇಡ್‌ಗಳಲ್ಲಿವೆ.
ಹೊಸ ಬಲೆನೊ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು 12ವ್ಯಾಟ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಳಸುವುದನ್ನು ಮುಂದುವರೆಸುವ ನಿರೀಕ್ಷೆಯಿದ್ದು, ಈ ಇಂಜಿನ್ 90ಎಚ್‌ಪಿ ಶಕ್ತಿ ಮತ್ತು 113ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಮತ್ತು 83ಎಚ್‌ಪಿ ಪವರ್ ಮತ್ತು 113ಎನ್‌ಎಂ ಟಾರ್ಕ್ ಉತ್ಪಾದಿಸುವ ಕೆಲಸವನ್ನು 1.2-ಲೀಟರ್ ಕೆ12ಎನ್ ಪೆಟ್ರೋಲ್ ಎಂಜಿನ್ ಮಾಡುತ್ತದೆ. ಖರೀದಿದಾರರು ಎರಡು ಟ್ರಾನ್ಸ್ಮಿಷನ್ಗಳ ನಡುವೆ ಆಯ್ಕೆ ಮಾಡಲು ಸಾಧ್ಯವಾಗುತ್ತದೆ, 5-ಸ್ಪೀಡ್ ಮ್ಯಾನ್ಯುವಲ್ ಅಥವಾ AMT.
ಹೊಸ ಬಲೆನೋ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೋಜ಼್, ಹುಂಡೈ ಐ20, ಹೋಂಡಾ ಜಾಜ಼್, ಟೊಯೋಟಾ ಗ್ಲಾಂಜ಼ಾ, ಮತ್ತು ಫೋಕ್ಸ್‌ವ್ಯಾಗನ್ ಪೋಲೋಗಳ ಸ್ಪರ್ಧೆ ಎದುರಿಸಬೇಕಿದೆ.