ಕಲಬುರಗಿ: 93 ವರ್ಷದ ವೃದ್ಧೆಯ ಕೊನೆಯ ಆಸೆಯನ್ನು ಉಪಲೋಕಾಯುಕ್ತ ನ್ಯಾ. ವೀರಪ್ಪ ಅವರು ಈಡೇರಿಸಿದ್ದಾರೆ.
ಅನಾರೋಗ್ಯ ಪೀಡಿತರಾಗಿದ್ದ 93 ವರ್ಷದ ಕೈದಿಗೆ ಪೆರೋಲ್ ದೊರಕಿಸಿಕೊಟ್ಟಿದ್ದಾರೆ. ಕಲಬುರಗಿ ಜೈಲಿಗೆ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ವೃದ್ಧೆಯ ಮನವಿಗೆ ಸ್ಪಂದಿಸಿದ್ದರು. ಸಾವಿನ ಕೊನೆ ಕ್ಷಣದಲ್ಲಿ ಮನೆ ಸೇರಬೇಕೆಂದು ವೃದ್ಧೆ ಮಾಡಿದ ಮನವಿಗೆ ಸ್ಪಂದಿಸಿ ಪೆರೋಲ್ ನೀಡಲು ನ್ಯಾಯಮೂರ್ತಿ ವೀರಪ್ಪ ಸೂಚಿಸಿದ್ದರು.
ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿಗೂ ಯತ್ನಿಸಿದ್ದರು. ಜೈಲು ಅಧಿಕಾರಿಗಳು ವೃದ್ಧೆಗೆ 30 ದಿನಗಳ ಪೆರೋಲ್ ನೀಡಿದ್ದರು. ಮನೆಗೆ ತೆರಳಿದ ಕೆಲವು ದಿನಗಳ ನಂತರ ವೃದ್ಧೆ ನಾಗಮ್ಮ ನಿಧನರಾಗಿದ್ದಾರೆ. ಅಂತಿಮ ಕ್ಷಣವನ್ನು ಮನೆಯಲ್ಲಿ ಕಳೆಯಬೇಕೆಂಬ ಅವರ ಆಸೆ ಈಡೇರಿದಂತಾಗಿದೆ.