![Chikkanna's Upadhyaksha aims for December release- Cinema express](https://images.cinemaexpress.com/uploads/user/imagelibrary/2023/11/2/original/Upadhyaksha.jpg)
ಹಾಸ್ಯ ನಟ ಚಿಕ್ಕಣ್ಣ ಅಭಿನಯದ, ಅನಿಲ್ ಕುಮಾರ್ ನಿರ್ದೇಶನದ ‘ಉಪಾಧ್ಯಕ್ಷ’ ಸಿನಿಮಾ ಕಳೆದ ತಿಂಗಳು ಜನವರಿ 26 ಗಣರಾಜ್ಯೋತ್ಸವದ ದಿನದಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಇದೀಗ ಈ ಚಿತ್ರ 25 ದಿನಗಳನ್ನು ಪೂರೈಸುವ ಮೂಲಕ ತನ್ನ ನಾಗಲೋಟವನ್ನು ಮುಂದುವರಿಸಿದೆ. ಈ ಸಂತಸವನ್ನು ಚಿಕ್ಕಣ್ಣ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಡಿಎನ್ ಸಿನಿಮಾ ಬ್ಯಾನರ್ ನಲ್ಲಿ ಸ್ಮಿತಾ ಉಮಾಪತಿ ನಿರ್ಮಾಣ ಮಾಡಿದ್ದು, ಚಿಕ್ಕಣ್ಣ ಹಾಗೂ ಮಲೈಕಾ ವಾಸುಪಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ರವಿಶಂಕರ್, ಸಾಧುಕೋಕಿಲ, ಧರ್ಮಣ್ಣ ಕಡೂರು ಮತ್ತು ವೀಣಾ ಸುಂದರ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ ಎಲ್ ರಾಜಶೇಖರ್ ಡೈಲಾಗ್ ಬರೆದಿದ್ದಾರೆ.
![](https://kannadadunia.com/wp-content/uploads/2024/02/9c59b2bd-0ad7-4b07-a0cc-ab16a26e916c-1024x982.jpg)