alex Certify ಮತ್ತು ಬರಿಸಿ ಮಹಿಳೆ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ ಮೇಲ್ –ದೂರು ಕೊಡಲು ಹೋದ್ರೆ ಬೆದರಿಸಿ ಕಳಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತು ಬರಿಸಿ ಮಹಿಳೆ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ ಮೇಲ್ –ದೂರು ಕೊಡಲು ಹೋದ್ರೆ ಬೆದರಿಸಿ ಕಳಿಸಿದ ಪೊಲೀಸರು

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆ ಖಾರ್ಖೋಡಾ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಆರೋಪ ಕೇಳಿಬಂದಿದೆ.

ಮಹಿಳೆ ಪೊಲೀಸರಿಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಲು ನಿರ್ಲಕ್ಷ ತೋರಿದ್ದಾರೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಮಹಿಳೆ ಮುಖ್ಯಮಂತ್ರಿಯವರ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ನೀಡಿರುವ ಮಾಹಿತಿಯಂತೆ ಫೆಬ್ರವರಿ 15 ರಂದು ಕೆಲಸದ ನಿಮಿತ್ತ ಆರೋಪಿ ಬಳಿಗೆ ಹೋಗಿದ್ದು, ಹೋಟೆಲ್ ಗೆ ಕರೆದೊಯ್ದು ಪಾನೀಯದಲ್ಲಿ ಮತ್ತು ಬರುವ ವಸ್ತು ಬೆರೆಸಿ ಕೊಟ್ಟಿದ್ದಾನೆ. ಬಳಿಕ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮೊಬೈಲ್ ಫೋನ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾನೆ. ಅಲ್ಲದೇ, ವಿಡಿಯೋ ವೈರಲ್ ಮಾಡುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಕಂಗಾಲಾದ ಮಹಿಳೆ ಬಿಜ್ಲಿ ಬಾಂಬಾ ಪೊಲೀಸ್ ಪೋಸ್ಟ್ ನಲ್ಲಿ ದೂರು ದಾಖಲಿಸಲು ಹೋಗಿದ್ದಾರೆ. ಆದರೆ ಪೊಲೀಸರು ಮಹಿಳೆಗೆ ಬೆದರಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಬಹಿರಂಗವಾಗುತ್ತಲೇ ಇನ್ಸ್ ಪೆಕ್ಟರ್ ಸಂಜಯ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...