ತನ್ನ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೆ ಮಾಡುತ್ತಿದ್ದ ವೇಳೆ ಎಳೆದೊಯ್ದ ಗುಂಪು ಅತ್ಯಾಚಾರ ಎಸಗಿ ಮಾರಾಟ ಮಾಡಿದೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಆರೋಪಿಗಳು ತನ್ನನ್ನು ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದರು ಮತ್ತು ನಂತರ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೇರೊಬ್ಬರೊಂದಿಗೆ ಇರುವಂತೆ ಒತ್ತಾಯಿಸಿದರು ಎಂದೂ ಸಹ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುರ್ಖಾ ಕಡ್ಡಾಯ ವಿರುದ್ಧ ಬೀದಿಗಿಳಿದ ಅಫ್ಘಾನಿಸ್ತಾನ ಮಹಿಳೆಯರು
ಏಪ್ರಿಲ್ 21 ರಂದು ನಡೆಯಲಿರುವ ತನ್ನ ಮದುವೆಗೆ ಕಾರ್ಡ್ ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಏಪ್ರಿಲ್ 18 ರಂದು ತನ್ನನ್ನು ಅಪಹರಿಸಿದ್ದಾರೆ ದೂರಿನಲ್ಲಿ ಆರೋಪಿಸಿದ್ದಾಳೆ.
ದಾಟಿಯಾದಲ್ಲಿದ್ದಾಗ ತನ್ನ ತಂದೆಯನ್ನು ಅಲ್ಲಿಗೆ ಕರೆಸುವಲ್ಲಿ ಆಕೆ ಯಶಸ್ವಿಯಾದಳು, ನಂತರ ಪೊಲೀಸರ ಸಹಾಯದಿಂದ ರಕ್ಷಿಸಲಾಯಿತು.
ತನ್ನನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಮಾರಾಟ ಮಾಡಿದ ಆರೋಪದ ಮೇಲೆ ಕೆಲವರ ವಿರುದ್ಧ ಮಹಿಳೆ ನೀಡಿದ ದೂರಿನ ಮೇರೆಗೆ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.