ಲಖನೌ: ಸೀತಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸತ್ ಸದಸ್ಯ ರಾಕೇಶ್ ರಾಥೋಡ್ ವಿರುದ್ಧ ಸೀತಾಪುರದ 20 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ, ಶೋಷಣೆ, ಕೊಲೆ ಬೆದರಿಕೆ ಮತ್ತು ಅಕ್ರಮ ಬಂಧನ ಆರೋಪ ಮಾಡಿದ್ದಾರೆ. ಸೀತಾಪುರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸೀತಾಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿದ ಮಹಿಳೆ, 2018 ರಲ್ಲಿ ಸಂಸದು ತಮ್ಮ ಆಶ್ರಯದಲ್ಲಿ ರಾಜಕೀಯ ಸಹಯೋಗ ಪ್ರಸ್ತಾಪಿಸಿದಾಗ ಅವರೊಂದಿಗೆ ಸಂಬಂಧ ಬೆಳೆಯಿತು ಎಂದು ಆರೋಪಿಸಿದ್ದಾರೆ.
ಆರೋಪಿ ತಮ್ಮ ಸ್ಥಾನವನ್ನು ಬಳಸಿಕೊಂಡು ನಂಬಿಕೆ ಬೆಳೆಸಿದ್ದಾರೆ. ತೈಲಿಕ್ ಮಹಾಸಂಘದ ಮಹಿಳಾ ಜಿಲ್ಲಾ ಅಧ್ಯಕ್ಷೆಯಾಗಿ ಅವರನ್ನು ನೇಮಿಸಿದ್ದಾರೆ. ಮಾರ್ಚ್ 2020 ರಲ್ಲಿ ರಾಕೇಶ್ ಅವರನ್ನು ತಮ್ಮ ಮನೆಯಲ್ಲಿ ಬಂಧಿಸಿ ಅತ್ಯಾಚಾರ ಮಾಡಿದ್ದಾರೆ. ನಂತರ ಹಲ್ಲೆ ಮಾಡಿದ್ದು, ಮೌನವಾಗಿರಲು ಮದುವೆ ಮತ್ತು ರಾಜಕೀಯ ಸ್ಥಾನ ಮಾನದ ಭರವಸೆ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
2024 ರಲ್ಲಿ ಸಂಸದರಾದ ನಂತರ ರಾಕೇಶ್ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದು, ಜೀವ ಬೆದರಿಕೆ ಹಾಕಿದ್ದಾರು. ಸಂತ್ರಸ್ತರ ಕುಟುಂಬವು ನಿರಂತರ ಕಿರುಕುಳದಿಂದಾಗಿ ಭಯದಲ್ಲಿ ಬದುಕುತ್ತಿದೆ ಎಂದು ಹೇಳಲಾಗಿದೆ.
ಸೀತಾಪುರದ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು, ಜನವರಿ 15 ರಂದು ಮಹಿಳೆ ತನ್ನನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಸಂಸದರ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಅಕ್ರಮ ಬಂಧನದ ಆರೋಪದ ಮೇಲೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.