
ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು ರಕಬ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಜೊತೆ ಈ ಅಧಿಕಾರಿ ಸಂಬಂಧ ಹೊಂದಿದ್ದ. ಇವರಿಬ್ಬರೂ ಮಹಿಳಾ ಎಸ್ಐ ಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯಲ್ಲೇ ತಮ್ಮ ರಾಸಲೀಲೆ ನಡೆಸುತ್ತಿದ್ದು, ಇತ್ತೀಚೆಗೆ ಆತನ ಪತ್ನಿಗೆ ವಿಷಯ ತಿಳಿದಿದೆ.
ಹೀಗಾಗಿ ತನ್ನ ಪುತ್ರ ಹಾಗೂ ಸಂಬಂಧಿಗಳೊಂದಿಗೆ ಬಂದ ಮಹಿಳೆ, ತನ್ನ ಪತಿ ಮಹಿಳಾ ಎಸ್ಐ ಜೊತೆಗೆ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಬಳಿಕ ಇಬ್ಬರಿಗೂ ಸಹ ಹಿಗ್ಗಾಮುಗ್ಗಾ ಗೂಸಾ ಸಹ ನೀಡಿದ್ದು, ಪೊಲೀಸ್ ಠಾಣೆಯ ಸಮೀಪದಲ್ಲೇ ಇದ್ದ ವಸತಿ ಗೃಹದ ಬಳಿ ನಡೆದ ಈ ಘಟನೆಯನ್ನು ಸಾರ್ವಜನಿಕರೂ ಸಹ ವೀಕ್ಷಿಸಿದ್ದಾರೆ. ಹಾಡಹಗಲೇ ನಡೆದ ಈ ಘಟನೆಯಿಂದ ಆಗ್ರಾ ಪೊಲೀಸರು ತಲೆತಗ್ಗಿಸುವಂತಾಗಿದ್ದು, ಈಗ ಹಿರಿಯ ಅಧಿಕಾರಿಗಳು ಮಹಿಳಾ ಎಸ್ಐ ಹಾಗೂ ಆಕೆ ಸಂಪರ್ಕ ಹೊಂದಿದ್ದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.