ಪ್ರತ್ಯೇಕ ರಾಜ್ಯಗಳಾಗಿ 21 ವರ್ಷಗಳು ಕಳೆದರೂ ಕೆಲವೊಂದು ಸಂಪನ್ಮೂಲಗಳ ಹಂಚಿಕೆ ವಿಚಾರದಲ್ಲಿ ಇನ್ನೂ ನಿರ್ಣಯಕ್ಕೆ ಬಂದಿರದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ನಡುವಿನ ಹಲವಾರು ವಿಚಾರಗಳಿಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಪರಿಹಾರ ಕಂಡುಕೊಂಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉತ್ತರಾಖಂಡದ ಮುಖ್ಯ ಮಂತ್ರಿ ಪುಷ್ಕರ್ ಸಿಂಗ್ ಧಾಮಿ, 21 ವರ್ಷಗಳ ಹಳೆಯ ವಿವಾದಗಳಿಗೆ ಅಂತ್ಯ ಹಾಡಿದ್ದಾರೆ. ಜಲ ಸಂಪನ್ಮೂಲ, ಸಾಮಾನ್ಯ ಗಡಿಗಳು, ಇಂಧನ ಸೇರಿದಂತೆ ಪರಸ್ಪರ ಹಿತಾಸಕ್ತಿ ಇರುವ ಅನೇಕ ವಿಷಯಗಳ ಕುರಿತಂತೆ ಉಭಯ ರಾಜ್ಯ ಸರ್ಕಾರಗಳು ಇತ್ಯರ್ಥ ಮಾಡಿಕೊಂಡಿವೆ.
PM Kisan Yojana: ರೈತರಿಗೆ ಸಿಗಲಿದೆ ಈ ಎಲ್ಲ ಲಾಭ
ನವೆಂಬರ್ 2000ದಲ್ಲಿ ಉತ್ತರ ಪ್ರದೇಶದಿಂದ ಉತ್ತರಾಖಂಡ ಬೇರ್ಪಟ್ಟರೂ ಸಹ ಹಿಮಾಲಯದ ರಾಜ್ಯದಲ್ಲಿರುವ ಜಮೀನು ಹಾಗೂ ಕಾಲುವೆಗಳು ಸೇರಿ ಅನೇಕ ಆಸ್ತಿಗಳ ಮೇಲೆ ಉತ್ತರ ಪ್ರದೇಶವೇ ಇನ್ನೂ ಮಾಲೀಕತ್ವ ಹೊಂದಿತ್ತು.
ಇದೀಗ 5,700 ಹೆಕ್ಟೇರ್ ಜಮೀನಿನ ಸರ್ವೇ ಮಾಡಲಾಗುವುದು ಎಂದ ಧಾಮಿ, ಈ ಜಮೀನಿನಲ್ಲಿ ಉತ್ತರ ಪ್ರದೇಶಕ್ಕೆ ಉಪಯುಕ್ತವಾದ ಜಮೀನು ಬಿಟ್ಟು ಮಿಕ್ಕ ಜಾಗವನ್ನು ಉತ್ತರಾಖಂಡ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಉಭಯ ರಾಜ್ಯಗಳ ನಡುವಿನ ಇನ್ನಷ್ಟು ವಿಷಯಗಳನ್ನು ಇತ್ಯರ್ಥ ಮಾಡಿಕೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಕೋರಲಾಗಿದೆ.