ಲಖ್ನೋ: ಉತ್ತರಪ್ರದೇಶ ಸರ್ಕಾರ ಅನ್ಲಾಕ್ ಪ್ರಕ್ರಿಯೆ ಆರಂಭಿಸಿದೆ. ಕಂಟೈನ್ಮೆಂಟ್ ವಲಯಗಳ ಹೊರಗಿನ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಈಗ ಇರುವ ಕೊರೋನಾ ಕರ್ಫ್ಯೂ ನಿರ್ಬಂಧ ಸಡಿಲ ಮಾಡುವತ್ತ ಹೆಜ್ಜೆ ಇಟ್ಟಿದೆ. 55 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡಿದ್ದು, ಜೂನ್ 1 ರಿಂದ ಅನ್ಲಾಕ್ ಪ್ರಕ್ರಿಯೆ ಶುರುವಾಗಲಿವೆ. ಆದರೂ, ಲಾಕ್ಡೌನ್ ನಿರ್ಬಂಧಗಳು ಜಿಲ್ಲೆಗಳಲ್ಲಿ ಮುಂದುವರಿಯಲಿವೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಇಂದು 1900 ಕೋವಿಡ್ ಪ್ರಕರಣಗಳು ದಾಖಲಾಗಿದ್ದು 41,000 ಸಕ್ರಿಯ ಪ್ರಕರಣಗಳು ಇವೆ. ಕಡಿಮೆ ಪಾಸಿಟಿವಿಟಿ ಮತ್ತು ಹೆಚ್ಚಿನ ಚೇತರಿಕೆ ಪ್ರಮಾಣವನ್ನು ಹೊಂದಿದ್ದೇವೆ ಎಂದು ತಿಳಿಸಿದ ಅವರು, ಜೂನ್ 1 ರಿಂದ ಕಂಟೈನ್ಮೆಂಟ್ ಹೊರಗಿನ ಮಾರುಕಟ್ಟೆ ತೆರೆಯಬಹುದು. ವಾರಾಂತ್ಯ ಕರ್ಫ್ಯೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.