VIDEO | ಶಾಲಾ ಸಮಯದಲ್ಲಿ ‘ಕ್ಯಾಂಡಿ ಕ್ರಷ್’ ಆಡಿದ ಶಿಕ್ಷಕ ಸಸ್ಪೆಂಡ್ 11-07-2024 4:24PM IST / No Comments / Posted In: Latest News, India, Live News ಕ್ಯಾಂಡಿ ಕ್ರಷ್ ಆಟ ಶಿಕ್ಷಕನೊಬ್ಬನಿಗೆ ಮುಳುವಾಗಿದೆ. ಶಾಲೆ ಅವಧಿಯಲ್ಲಿ ಕ್ಯಾಂಡಿ ಕ್ರಷ್ ಆಡ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಕೆಲಸದ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಶಿಕ್ಷಕ ಕ್ಯಾಂಡಿ ಕ್ರಷ್ ಸಾಗಾ ಆಡಿದ್ದಾರೆ. ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಇತರ ಅಪ್ಲಿಕೇಶನ್‌ಗಳ ಹೊರತಾಗಿ ಕೆಲಸದ ಸಮಯದಲ್ಲಿ ಶಿಕ್ಷಕರು 17 ನಿಮಿಷಗಳ ಕಾಲ ಫೇಸ್‌ಬುಕ್ ಬಳಸಿದ್ದಾರೆ. ಶಿಕ್ಷಕರು ಒಂದು ಗಂಟೆ 17 ನಿಮಿಷಗಳ ಕಾಲ ಕ್ಯಾಂಡಿ ಕ್ರಷ್ ಸಾಗಾವನ್ನು ಆಡಿದ್ದಾರೆ. 26 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಂಡುಹಿಡಿದಿದ್ದಾರೆ. ಅಧಿಕೃತ ಸೂಚನೆಯ ಮೇರೆಗೆ ಡಿಎಂ, ಶಿಕ್ಷಕರ ಮಾಹಿತಿ ಹಂಚಿಕೊಂಡು ಅವರನ್ನು ಅಮಾನತು ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಅಮಾನತಿನ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಶಿಕ್ಷಕರ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಜನರು ಡಿಎಂ ಅನ್ನು ಟೀಕಿಸಿದ್ದಾರೆ. ಗೌಪ್ಯತೆ ಉಲ್ಲಂಘಿಸಿದ ಡಿಎಂ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಮತ್ತೆ ಕೆಲವರು ಡಿಎಂ ಪರ ಮಾತನಾಡಿದ್ದಾರೆ. ಶಾಲಾ ಅವಧಿಯಲ್ಲಿ ಮಕ್ಕಳಿಗೆ ಪಾಠ ಹೇಳುವ ಬದಲು ಶಿಕ್ಷಕ ಇಂಥ ಕೆಲಸ ಮಾಡಿದ್ದು ತಪ್ಪು ಎಂದಿದ್ದಾರೆ. A UP govt school teacher in Sambhal district was suspended after district magistrate (DM) scrubbed through his mobile activity. According to official report, the teacher played Candy crush saga game for 1 hours 17 minutes, spoke over his phone for 26 minutes and used Facebook for… pic.twitter.com/0Tv2yvqXCt — Piyush Rai (@Benarasiyaa) July 10, 2024