ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ, ಪರ್ತಾಪುರ್ ಪ್ರದೇಶದಲ್ಲಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬೀದಿ ನಾಯಿಗಳು ಶವವನ್ನು ತಿನ್ನಲು ಯತ್ನಿಸಿದಾಗ ಚೀಲದಲ್ಲಿ ಮೃತದೇಹ ಇರುವುದು ಪತ್ತೆಯಾಗಿದೆ.
ಮಹಿಳೆಯ ಶವ ಕಾಶಿ ಗ್ರಾಮದ ಕೊಳದ ಬಳಿ ಪತ್ತೆಯಾಗಿದೆ. ಪರ್ತಾಪುರದಲ್ಲಿ ಶವವನ್ನು ಗ್ರಾಮಸ್ಥರು ನೋಡಿದಾಗ ಗ್ರಾಮದಲ್ಲಿ ಭೀತಿ ಆವರಿಸಿದೆ.
ಇಲ್ಲಿಯವರೆಗೆ ಶವವನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆಕೆಯನ್ನು ಬೇರೆ ಕಡೆ ಕೊಂದು ಶವವನ್ನು ಗ್ರಾಮದಲ್ಲಿ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತ ಮಹಿಳೆಯನ್ನು ಗುರುತಿಸಲು ಪೊಲೀಸರು ನೆರೆಯ ಜಿಲ್ಲೆಗಳಿಗೆ ಮಾಹಿತಿ ನೀಡಿದ್ದಾರೆ. ಮೀರತ್ ಪೊಲೀಸರು ಮತ್ತು ಕಣ್ಗಾವಲು ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಬೀದಿ ನಾಯಿಗಳು ಶವವನ್ನು ಎಳೆದುಕೊಂಡು ಹೋಗಿ ತಿನ್ನಲು ಯತ್ನಿಸುತ್ತಿರುವುದನ್ನು ಕಂಡು ಗ್ರಾಮಸ್ಥರಿಗೆ ಗೋಣಿ ಚೀಲದ ಬಗ್ಗೆ ಅನುಮಾನ ಮೂಡಿದೆ.
ಗ್ರಾಮಸ್ಥರು ಚೀಲವನ್ನು ತೆರೆದಾಗ ಮುಸುಕು(ಬುರ್ಖಾ) ಧರಿಸಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ನಂತರ ಎಎಸ್ಪಿ(ಬ್ರಹ್ಪುರಿ) ವಿವೇಕ್ ಯಾದವ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅನುಮಾನಾಸ್ಪದ ವಾಹನಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.