ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಪೊಲೀಸ್ ಆಗಿರುವ ಮಾವನೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಗೆ ಆಕೆಯ ಸಹಾಯ ಮಾಡುವ ಬದಲು ಪತಿ ತ್ರಿವಳಿ ತಲಾಖ್ ಉಚ್ಛರಿಸುವ ಮೂಲಕ ಆಕೆಗೆ ವಿಚ್ಛೇದನ ನೀಡಿದ್ದಾನೆ.
ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಳು. ಪೋಲಿಸ್ ಆಗಿರುವ ತನ್ನ ಪತಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಆತ ಸಹಾಯ ಮಾಡುವ ಬದಲು ವಿಚ್ಛೇದನ ನೀಡಿದ್ದಾನೆ. ಅತ್ತೆ ಕೂಡ ಅಪರಾಧವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳಾ ಪೊಲೀಸ್ ದೂರಿದ್ದಾಳೆ.
ಸಂತ್ರಸ್ತೆಯ ದೂರಿನ ಮೇರೆಗೆ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಗಾಜಿಯಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯ ಮಾವ, ಪತಿ, ಅತ್ತೆಯ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾವ ನಜೀರ್ ಅಹಮದ್ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮೀರತ್ ಪೊಲೀಸ್ ಲೈನ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಪತಿ ಅಬಿದ್ ಕೂಡ ಆಕೆಗೆ ಥಳಿಸಿ ಡೈವೋರ್ಸ್ ನೀಡಿದ್ದಾನೆ. ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ(ನಗರ) ವಿನೀತ್ ಭಟ್ನಾಗರ್ ತಿಳಿಸಿದ್ದಾರೆ.