ಮುಜಾಫರ್ ನಗರ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಪತ್ನಿಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿ, ಮೂವರು ಅಪ್ರಾಪ್ತ ಮಕ್ಕಳನ್ನು ಗಂಗಾ ಕಾಲುವೆಗೆ ಎಸೆದಿದ್ದಾನೆ. ಇಂತಹ ಕೃತ್ಯವೆಸಗಿದ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಜಾಫರ್ ನಗರದ ಬೇಸಿಡಿ ಗ್ರಾಮದ ಪಪ್ಪು ಇಂತಹ ಕೃತ್ಯ ಎಸಗಿದ ಆರೋಪಿ. ಈತನ ಪತ್ನಿ 28 ವರ್ಷದ ಡೋಲಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದರಿಂದ ಇಂತಹ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಳೆದ 15 ದಿನಗಳಿಂದ ದೈಹಿಕ ಸಂಬಂಧ ಬೆಳೆಸುವಂತೆ ಪತ್ನಿಗೆ ಬಲವಂತ ಮಾಡುತ್ತಿದ್ದ. ಆದರೆ, ಆಕೆ ನಿರಾಕರಿಸಿದ್ದರಿಂದ ಕೋಪಗೊಂಡಿದ್ದ. ಲೈಂಗಿಕ ಕ್ರಿಯೆ ನಡೆಸದಿದ್ದರೆ ಕೊಲೆ ಮಾಡುವುದಾಗಿ ಎಚ್ಚರಿಸಿದ್ದ. ಆದರೂ ಪತ್ನಿ ಸರಸಕ್ಕೆ ಒಪ್ಪದಿದ್ದಾಗ ತಲೆಗೆ ಗುಂಡು ಹಾರಿಸಿದ್ದಾನೆ.
ನಂತರ 5, 3 ವರ್ಷ ಮತ್ತು 18 ತಿಂಗಳ ಮಕ್ಕಳನ್ನು ಕಾಲುವೆಗೆ ಎಸೆದು ಪರಾರಿಯಾಗಿದ್ದಾನೆ. ಮಾಹಿತಿ ಪಡೆದು ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ, ಮಕ್ಕಳ ಮೃತದೇಹಗಳು ಪತ್ತೆಯಾಗಿಲ್ಲ. ಮೂಲಗಳ ಪ್ರಕಾರ, 10 ವರ್ಷಗಳ ಹಿಂದೆ ಪಪ್ಪುವಿನ ಅಣ್ಣನೊಂದಿಗೆ ಡೋಲಿ ಮದುವೆಯಾಗಿತ್ತು. ಅವನು ತೀರಿಕೊಂಡ ನಂತರ ಪಪ್ಪು ಮದುವೆಯಾಗಿದ್ದ. ಸೆಕ್ಸ್ ಗೆ ಒಪ್ಪದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.