ಲಖನೌ: ಉತ್ತರ ಪ್ರದೇಶದ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕ ದಂಪತಿಯ ಮೇಲೆ ಇಪ್ಪತ್ತರ ಹರೆಯದ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಬುಧವಾರ ರಾತ್ರಿ ಕೋಚ್ ಬಿ3 ಒಳಗೆ ಈ ಘಟನೆ ನಡೆದಿದೆ. ರೈಲು ವಿರಂಗನ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ಕಡೆಗೆ ಪ್ರಯಾಣಿಸುತ್ತಿದ್ದಾಗ, ಸಂತ್ರಸ್ತರು, ಕೆಳಗಿನ ಬರ್ತ್ ಸಂಖ್ಯೆ 57 ಮತ್ತು 60 ರಲ್ಲಿ ಮಲಗಿದ್ದರು, ಯುವಕ ಅಮಲಿನಲ್ಲಿ ವೃದ್ಧ ದಂಪತಿ ಮತ್ತು ಅವರ ಲಗೇಜ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ.
ಇದು ನಮಗೆ ಆಘಾತಕಾರಿಯಾಗಿದೆ. ರಾಷ್ಟ್ರ ರಾಜಧಾನಿಗೆ ಹೊರಟಿದ್ದ ನಮ್ಮ ಪ್ರಯಾಣವು ಶಾಂತಿಯುತವಾಗಿರಬೇಕಿತ್ತು, ಆದರೆ, ನಮ್ಮ ಕನಸಿನಲ್ಲಿಯೂ ಊಹಿಸದಂತಹ ಘಟನೆ ನಡೆದಿದೆ. ಯಾರಾದರೂ ನಮ್ಮ ಮೇಲೆ ಮೂತ್ರ ವಿಸರ್ಜಿಸುತ್ತಾರೆ ಎಂದು ನಾವು ಭಾವಿಸಿರಲಿಲ್ಲ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿರುವ ಪ್ರಯಾಣಿಕರು ಹೇಳಿದ್ದಾರೆ.
ಆರೋಪಿ ಪ್ರಯಾಣಿಕನನ್ನು ನೈಋತ್ಯ ದೆಹಲಿಯ ಕುತುಬ್ ವಿಹಾರ್‌ನ ರಿತೇಶ್ ಎಂದು ಗುರುತಿಸಲಾಗಿದೆ.
ಯುವಕ ಮದ್ಯದ ಅಮಲಿನಲ್ಲಿದ್ದ. ಅವನು ನಮ್ಮ ಮೇಲೆ ಮತ್ತು ನಮ್ಮ ಲಗೇಜ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಂತರ, ಸಹ ಪ್ರಯಾಣಿಕರು ಕೋಚ್ ಅಟೆಂಡರ್ ಮತ್ತು ಟಿಟಿಇಗೆ ಎಚ್ಚರಿಕೆ ನೀಡಿದರು. ಇದು ನರಕದಂತೆ ಇತ್ತು, ಎಲ್ಲವೂ ಒದ್ದೆಯಾಗಿ ಮತ್ತು ದುರ್ವಾಸನೆಯಿಂದ ಕೂಡಿದೆ. ಆರೋಪಿಯನ್ನು ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ಕರೆದೊಯ್ಯಲಾಯಿತು ಸಂತ್ರಸ್ತೆ ಹೇಳಿದ್ದಾರೆ.
ಆನ್ ಬೋರ್ಡ್ ಟಿಟಿಇ ಬಸ್ರುದ್ದೀನ್ ಖಾನ್ ತಕ್ಷಣ ಕೋಚ್ ಅನ್ನು ಸ್ಯಾನಿಟೈಜ್ ಮಾಡಲು ಹೌಸ್ ಕೀಪಿಂಗ್ ಸಿಬ್ಬಂದಿ ಕರೆದರು. ನಂತರ ಅವರು ಘಟನೆಯ ಬಗ್ಗೆ ಆರ್‌ಪಿಎಫ್ ಝಾನ್ಸಿಗೆ ಮೆಮೋವನ್ನು ನೀಡಿದರು. ಮುಂದಿನ ಕಾನೂನು ಕ್ರಮಕ್ಕಾಗಿ ರಿತೇಶ್ ನನ್ನು ಅವರಿಗೆ ಹಸ್ತಾಂತರಿಸಿದರು.
ರಿತೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದ PRO ಮನೋಜ್ ಸಿಂಗ್ ಹೇಳಿದ್ದಾರೆ.
ಝಾನ್ಸಿಯ ಆರ್‌ಪಿಎಫ್ ಎಸ್‌ಹೆಚ್‌ಒ ನಂತರ ಆರೋಪಿಗೆ ಜಾಮೀನು ನೀಡಲಾಗಿದೆ ಎಂದು ಖಚಿತಪಡಿಸಿದರು, ಏಕೆಂದರೆ ಸೆಕ್ಷನ್ ಕುಡಿತಕ್ಕೆ ಸಂಬಂಧಿಸಿದೆ.