ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾಲುವೆ ದಡದಲ್ಲಿ ಮಲ ವಿಸರ್ಜನೆ ಮಾಡ್ತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ನಡೆಸಿದೆ. ವ್ಯಕ್ತಿಯ ಜನನಾಂಗವನ್ನು ಮೊಸಳೆ ಕಚ್ಚಿದ್ದು, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
60 ವರ್ಷದ ವ್ಯಕ್ತಿ, ಬುದ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮೊಸಳೆ ಅವರ ಜನನಾಂಗಕ್ಕೆ ಕಚ್ಚಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕನ್ಹಯ್ಯ ಗೊಂಡ್ ಪೀಡಿತ ವ್ಯಕ್ತಿ. ಆತ ಮೊಸಳೆ ನೋಡ್ತಿದ್ದಂತೆ ತನ್ನನ್ನು ರಕ್ಷಿಸಿಕೊಳ್ಳಲು ಎದ್ದು ನಿಂತಿದ್ದಾನೆ. ಈ ವೇಳೆ ಮೊಸಳೆ ದಾಳಿ ನಡೆಸಿದೆ.
ಗೊಂಡ್ ನೋವಿನಿಂದ ಕಿರುಚುತ್ತಿದ್ದಂತೆ ಗ್ರಾಮಸ್ಥರು ಓಡಿ ಬಂದಿದ್ದಾರೆ. ರಕ್ತದಲ್ಲಿ ಒದ್ದಾಡುತ್ತಿದ್ದ ಗೊಂಡ್ ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಘಟನೆ ನಂತ್ರ ಸ್ಥಳೀಯರ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಅಲ್ಲಿಗೆ ಹೋಗದಂತೆ ಜನರಿಗೆ ಸೂಚನೆ ನೀಡಿದೆ. ಅನಿವಾರ್ಯ ಸಂದರ್ಭದಲ್ಲಿ ಅಗತ್ಯ ಎಚ್ಚರಿಕೆಯನ್ನು ತೆಗೆದುಕೊಳ್ಳುವಂತೆ ಹೇಳಿದೆ. ಮೊಸಳೆ ಆಹಾರ ಹುಡುಕಿಕೊಂಡು ದಡಕ್ಕೆ ಬಂದಿರುವ ಸಾಧ್ಯತೆ ಇದ್ದು, ಮತ್ತೊಮ್ಮೆ ಮೊಸಳೆ ಕಣ್ಣಿಗೆ ಬಿದ್ದರೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.