
ಘಾಜಿಯಾಬಾದ್(ಉತ್ತರ ಪ್ರದೇಶ): 42 ವರ್ಷದ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ನಾಲ್ವರು ವ್ಯಕ್ತಿಗಳು ನಿದ್ರಿಸುತ್ತಿದ್ದಾಗ ಅವರ ಖಾಸಗಿ ಭಾಗಗಳನ್ನು ಛಿದ್ರಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 28 ರಂದು ವೇವ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಶಹಪುರ್ ಬಮ್ಹೆಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಗಾಯಗೊಂಡ ಸಂಜಯ್ ಯಾದವ್ ಪ್ರಸ್ತುತ ಮೀರತ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮಗ ಪ್ರಿನ್ಸ್ ಯಾದವ್ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ವೇವ್ ಸಿಟಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಉಪಾಸನಾ ಪಾಂಡೆ ತಿಳಿಸಿದ್ದಾರೆ.
ದೂರಿನ ಪ್ರಕಾರ, ಯಾದವ್ ನಿದ್ರಿಸುತ್ತಿರುವಾಗ ಹಲ್ಲೆಕೋರರು ಮನೆಗೆ ಪ್ರವೇಶಿಸಿದ್ದಾರೆ. ಅವರು ಮಾದಕ ವಸ್ತುವನ್ನು ನೀಡಿ ಪ್ರಜ್ಞಾಹೀನರನ್ನಾಗಿ ಮಾಡಿ ನಂತರ ಗಂಭೀರ ಗಾಯಗೊಳಿಸಿದ್ದಾರೆ.
ಮನೆಯ ಬಳಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿಲ್ಲ. ಗಾಯಾಳು ಇನ್ನೂ ಹೇಳಿಕೆ ನೀಡಿಲ್ಲ, ಮತ್ತು ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.