Video: ಊರಿಗೆ ಬಂದ ಮೊಸಳೆಗೆ ಕಾಲಿನಿಂದ ಒದ್ದ ವ್ಯಕ್ತಿ; ಪರದಾಡಿದ ಪ್ರಾಣಿಯ ವಿಡಿಯೋ ವೈರಲ್…! 07-08-2024 9:00PM IST / No Comments / Posted In: Latest News, India, Live News ದೇಶಾದ್ಯಂತ ಮುಂಗಾರು ಮಳೆ ಅಬ್ಬರಿಸಿದ್ದು, ಹಲವಾರು ಭಾಗಗಳಲ್ಲಿ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಕೇರಳದಲ್ಲಿ ಪ್ರವಾಹ- ಭೂಕುಸಿತ, ರಾಜ್ಯದ ಪಶ್ಚಿಮ ಘಟ್ಟದ ಭಾಗದಲ್ಲಿ ಭೂಕುಸಿತ, ಚೆನ್ನೈನಲ್ಲಿ ಜಲಾವೃತ, ಮಳೆ ನೀರಲ್ಲಿ ಮುಳುಗಿರುವ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಪ್ರದೇಶದಲ್ಲೂ ಮಳೆಯಿಂದ ಜನ ತೊಂದರೆಗೀಡಾಗಿದ್ದಾರೆ. ಜಲಚರಗಳು ಜನ ವಾಸಿಸುವ ಪ್ರದೇಶಗಳಿಗೆ ನುಗ್ಗಿ ಭಯ ಹುಟ್ಟಿಸಿವೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಿಂದ ಹೊರಬಿದ್ದಿರುವ ವೀಡಿಯೊದಲ್ಲಿ ಮೊಸಳೆಯೊಂದು ಹಳ್ಳಿಯ ಬೀದಿಗಳಲ್ಲಿ ತೆವಳುತ್ತಾ ಜನರನ್ನು ಬೆಚ್ಚಿಬೀಳಿಸಿದೆ. ವರದಿಗಳ ಪ್ರಕಾರ ನಂಗಲ್ ಸೋತಿ ಗ್ರಾಮದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಭೀತಿಗೆ ಕಾರಣವಾಗಿದ್ದರೆ ಓರ್ವ ಯಾವುದೇ ಭಯವಿಲ್ಲದೆ ಮೊಸಳೆಯನ್ನು ಕಾಲಿನಿಂದ ಒದ್ದು ನೋಯಿಸುತ್ತಿರುವುದು ಕಂಡುಬಂದಿದೆ. ಮೊಸಳೆ ಯಾರಿಗೂ ಹಾನಿಯಾಗದಂತೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಆದರೆ ವ್ಯಕ್ತಿಯೊಬ್ಬ ಮೊಸಳೆಯ ಬಳಿಗೆ ಬಂದು ಅದನ್ನು ತನ್ನ ಕಾಲಿನಿಂದ ಒದ್ದಿದ್ದಾನೆ. ಭೀತಿಯಿಂದ ಮೊಸಳೆ ರಕ್ಷಿಸಿಕೊಳ್ಳಲು ಮುಂದೆ ಸಾಗುತ್ತಾ ಹೋಗುತ್ತದೆ. ಮೊಸಳೆಯನ್ನು ಕಂಡ ಗ್ರಾಮಸ್ಥರು ಘಟನೆಯ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಮೊಸಳೆಯನ್ನು ರಕ್ಷಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ಮೊಸಳೆ ಸುತ್ತಾಡಿತ್ತು ಎನ್ನಲಾಗಿದೆ. बिजनौर : जंगल से निकलकर गांव में घुसा मगरमच्छ गांव की गलियों में घंटों तक टहलता रहा मगरमच्छ वन विभाग की टीम ने मगरमच्छ का किया रेस्क्यू बिजनौर के नांगल सोती गांव का मामला@bijnorpolice @UpforestUp #Bijnor #UPNews pic.twitter.com/rqmbAdUWAa — News1India (@News1IndiaTweet) August 7, 2024