alex Certify ಮೂರನೇ ಅಲೆ ಭೀತಿ, ಕೈದಿಗಳ ಭೇಟಿಗೆ ನಿಷೇಧ ಏರಿದ ಯು.ಪಿ. ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಅಲೆ ಭೀತಿ, ಕೈದಿಗಳ ಭೇಟಿಗೆ ನಿಷೇಧ ಏರಿದ ಯು.ಪಿ. ಸರ್ಕಾರ

ಉತ್ತರಪ್ರದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೋನ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂದರ್ಶಕರೊಂದಿಗೆ ಕೈದಿಗಳ ಭೇಟಿಯನ್ನ ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರದ ಕಾರಾಗೃಹ ಇಲಾಖೆ ನಿರ್ಧರಿಸಿದೆ.

ಕೊರೋನಾ ಸಾಂಕ್ರಾಮಿಕದ ಫಸ್ಟ್ ವೇವ್ ಸಮಯದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಮಾಡಿದ ನಂತರ ಮಾರ್ಚ್ 24, 2020 ರಂದು ಭೇಟಿಗಳನ್ನು ನಿರ್ಬಂಧಿಸಲಾಯಿತು.

ಅದಾದ ಮೇಲೆ ಆಗಸ್ಟ್ 16, 2021 ರಂದು ಈ ನಿಷೇಧವನ್ನು ತೆಗೆದುಹಾಕಲಾಯಿತು. ಅದರೆ ಈಗ ಒಮಿಕ್ರಾನ್ ಭೀತಿ ಇರುವುದರಿಂದ ಕೈದಿಗಳು ಅಥವಾ ಸಿಬ್ಬಂದಿಗಳಲ್ಲಿ ಕೊರೋನಾ ಹರಡದಿರಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

ಗೃಹ ಕಾರ್ಯಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ ಅವರು ಕೈದಿಗಳಿಗೆ ಲಸಿಕೆ ನೀಡಿರುವುದನ್ನ ಖಚಿತಪಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಮಾಸ್ಕ್ ಧರಿಸುವುದು ಮತ್ತು ಕಾರಾಗೃಹದಲ್ಲಿ ನೈರ್ಮಲ್ಯೀಕರಣದಂತಹ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಜೊತೆಗೆ ಹೊಸ ಕೈದಿಗಳ 14 ದಿನಗಳ ಕ್ವಾರಂಟೈನ್‌ಗಾಗಿ ತಾತ್ಕಾಲಿಕ ಕೊಠಡಿಗಳನ್ನ ಸ್ಥಾಪಿಸಬೇಕು, ಎಲ್ಲಾ ವಿಚಾರಣೆಗಳು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಇರಬೇಕು ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೋವಿಡ್ ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಕೈದಿಗಳ ನಡುವೆ ಕನಿಷ್ಠ ಸಂಪರ್ಕವನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...